ADVERTISEMENT

ಫ್ಯಾಷನ್‌: ಉಡುಪಿಗೊಪ್ಪುವ ವಾಚ್‌ ಇರಲಿ..

ಪವಿತ್ರಾ ಭಟ್
Published 21 ಜೂನ್ 2024, 23:35 IST
Last Updated 21 ಜೂನ್ 2024, 23:35 IST
   

ಹಿಂದೆಲ್ಲ ಸಮಯ ನೋಡಲೇಂದೇ ವಾಚ್‌ ಧರಿಸುತ್ತಿದ್ದರು. ಆದರೆ ಈಗ ವಾಚ್‌ ಧರಿಸುವುದೇ ಒಂದು ಟ್ರೆಂಡ್‌ ಆಗಿದೆ. ಮನೆಯಿಂದ ಹೊರ ಹೊರಡುವ ಮುನ್ನ ಡ್ರೆಸ್ಸಿಗೆ ಒಪ್ಪುವ ಹಾಗೆ ಟ್ರೆಂಡಿ ವಾಚ್‌ ಧರಿಸುವುದು ಫ್ಯಾಷನ್ ದುನಿಯಾದಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ.

ಮಾರುಕಟ್ಟೆಯಲ್ಲೂ ತರಹೇವಾರಿ ವಾಚ್‌ಗಳು ಲಗ್ಗೆಯಿಟ್ಟಿವೆ. ಹತ್ತಾರು ಕಂಪನಿಗಳು ವಿವಿಧ ರೀತಿಯ ಡಿಸೈನ್‌ಗಳ ವಾಚ್‌ಗಳನ್ನು ತಯಾರಿಸಿ ಫ್ಯಾಷನ್‌ ಪ್ರಿಯರ ಗಮನ ಸೆಳೆಯುತ್ತಿವೆ.

ಬ್ರೆಸ್‌ಲೇಟ್‌ ವಾಚ್‌

ADVERTISEMENT

ಕೈಗೆ ಧರಿಸುವ ಬಳೆ, ಬ್ರೆಸ್ಲೇಟ್‌ಗಳಂತೆ ಕಾಣುವ ವಾಚ್‌ಗಳು ಪುಟ್ಟ ಡೈಯಲ್‌ಗಳನ್ನು ಹೊಂದಿರುತ್ತವೆ. ಪುಟ್ಟ ಪುಟ್ಟ ಮಣಿಗಳನ್ನು ಪೂಣಿಸದಂತಿರುವ ಚೈನ್‌ನ ವಾಚ್‌ ಹೆಂಗಳೆಯರಿಗೆ ಅಚ್ಚುಮೆಚ್ಚು. ಇವು ಸಾಂಪ್ರದಾಯಿಕ ಲುಕ್‌ ನೀಡುತ್ತವೆ. ಸೀರೆ, ಕುರ್ತಾಗಳಿಗೆ ಬ್ರೇಸ್‌ಲೇಟ್‌ ವಾಚ್‌ಗಳು ಒಪ್ಪುತ್ತವೆ. ಪಾರ್ಟಿ, ಸಮಾರಂಭಗಳಿಗೆ ಬ್ರೇಸ್‌ಲೇಟ್ ವಾಚ್‌ ಹೇಳಿ ಮಾಡಿಸಿದಂತವು.

ಬೆಲ್ಟ್‌ ವಾಚ್‌

ಮೊದಲಿನಿಂದಲೂ ಬೆಲ್ಟ್‌ ವಾಚ್‌ಗಳು ಚಾಲ್ತಿಯಲ್ಲಿವೆ. ಈಗಂತೂ ಒಂದೇ ಡೈಯಲ್‌ಗೆ ಬೇರೆ ಬೇರೆ ಬಣ್ಣ, ಡಿಸೈನ್‌ ಮಾಡಿರುವ ಬೆಲ್ಟ್‌ಗಳು ಸಿಗುತ್ತವೆ. ಬೇಕಾದ ರೀತಿಯ ಬೆಲ್ಟ್‌ಗಳು ಬದಲಿಸಿಕೊಳ್ಳಬಹುದು. ಲೆದರ್‌, ನೈಲಾನ್‌, ಬಟ್ಟೆ, ಪ್ಲಾಸ್ಟಿಕ್‌ ಬೆಲ್ಟ್‌ಗಳನ್ನೂ ಒಂದೇ ಡೈಯಲ್‌ಗೆ ಹಾಕೊಳ್ಳಬಹುದು ಜೀನ್ಸ್‌, ಫ್ರಾಕ್‌ನಂತಹ ಡ್ರೆಸ್‌ಗಳಿಗೆ ಬೆಲ್ಟ್‌ ವಾಚ್‌ ಬೆಸ್ಟ್‌.  

ಸ್ಮಾರ್ಟ್‌ ವಾಚ್‌

ಈಗಂತೂ ಎಲ್ಲಾ ವಯಸ್ಸಿನವರಿಗೂ ಸ್ಮಾರ್ಟ್‌ ವಾಚ್‌ ಅಚ್ಚುಮೆಚ್ಚು. ನಮ್ಮ ಪ್ರತಿಯೊಂದು ಚಲನವಲನಗಳನ್ನೂ ದಾಖಲಿಸಿಕೊಳ್ಳುವ ಅವಕಾಶ ಇದರಲ್ಲಿ ಇರುತ್ತದೆ. ಜತೆಗೆ ಮೊಬೈಲ್‌ ಹಿಡಿದುಕೊಳ್ಳದೇ ಕರೆ ಮಾಡಬಹುದು, ಹಾಡುಗಳನ್ನು ಕೇಳಬಹುದು, ಅಷ್ಟೇ ಅಲ್ಲದೆ ಆರೋಗ್ಯದ ಮುನ್ನೆಚ್ಚರಿಕೆಯನ್ನೂ ಪಡೆಯಬಹುದು. ಸ್ಮಾರ್ಟ್‌ ವಾಚ್‌ಗಳೂ ಕೂಡ ಬೆಲ್ಟ್‌, ಚೈನ್‌ ಹೀಗೆ ವಿವಿಧ ವಿನ್ಯಾಸದಲ್ಲಿ, ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ.

ರಾಕಿ ವಾಚ್‌

ಹೊಸತರದ್ದೇನಾದರೂ ಬೇಕು ಎನ್ನುವವರಿಗೆ ರಾಕಿ ವಾಚ್‌ ಉತ್ತಮ ಆಯ್ಕೆ. ಸಿಂಪಲ್‌ ದಾರಗಳು, ಹೂವುಗಳಿಂದ ಕೂಡಿದ ಬೆಲ್ಟ್‌ಗಳು ಪುಟ್ಟ ಡೈಯಲ್‌ ವಾಚ್‌ನ ಲುಕ್‌ ಹೆಚ್ಚಿಸುತ್ತವೆ. ಕಾಲೇಜು ಹುಡುಗಿಯರಿಂದ ಹಿಡಿದು ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಈ ವಾಚ್‌ ಇಷ್ಟವಾಗುತ್ತದೆ.

ಕಪಲ್‌ ವಾಚ್‌

ಸಾಮಾನ್ಯವಾಗಿ ಪ್ರೇಮಿಗಳು ಅಥವಾ ದಂಪತಿ ಒಂದೇ ರೀತಿಯ ವಾಚ್‌ ಧರಿಸಲು ಇಷ್ಟಪಡುತ್ತಾರೆ. ಅಂಥವರಿಗೆ ಈ ಕಪಲ್‌ ವಾಚ್‌ಗಳು ಉತ್ತಮ ಆಯ್ಕೆ. ಚೌಕ, ವೃತ್ತಾಕಾರ ಸೇರಿ ವಿವಿಧ ವಿನ್ಯಾಸದಲ್ಲಿ ಈ ವಾಚ್‌ಗಳು ದೊರೆಯುತ್ತವೆ. ಡೈಯಲ್‌ನಲ್ಲಿ ರೋಮನ್, ಇಂಗ್ಲೀಷ್‌ ಅಂಕೆಗಳನ್ನು ಹೊಂದಿರುತ್ತವೆ. 

ಸ್ಪೋರ್ಟ್ಸ್‌ ವಾಚ್‌

ನೀವೇನಾದಾರೂ ಕ್ರೀಡೆಗಳಲ್ಲಿ ತೊಡಗಿದ್ದರೆ, ಚಾರಣ ಮಾಡುವುದಾದರೆ ಸ್ಪೋರ್ಟ್ಸ್‌ ವಾಚ್‌ಗಳು ಬೆಸ್ಟ್‌. ಇವು ಉತ್ತಮ ಗುಣಮಟ್ಟದ ವಾಚ್‌ಗಳಾಗಿದ್ದು, ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಎನ್ನುವ ಗೋಜಿರುವುದಿಲ್ಲ. ಕ್ಯಾಸಿಯೊ, ಡ್ರೆಸ್‌ ಬೆರಿ ಸೇರಿದಂತೆ ಹಲವು ಬ್ರಾಂಡ್‌ಗಳ ಸ್ಪೋರ್ಟ್ಸ್‌ ವಾಚ್‌ಗಳು ಮಾರುಕಟ್ಟೆ, ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.