ಬೆಂಗಳೂರು: ರೋಸ್ ಡೇ, ಪ್ರಪೋಸ್ ಡೇ ಮತ್ತು ಚಾಕೊಲೇಟ್ ಡೇ ಆಚರಿಸಿದ ನಂತರ ಇದೀಗ ಮುದ್ದಾದ ಟೆಡ್ಡಿಯೊಂದಿಗೆ ನೀವೂ ನಿಮ್ಮ ಪ್ರೀತಿಪಾತ್ರರ ಬಳಿ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧರಾಗಿ!
‘ಟೆಡ್ಡಿ ಡೇ’ ಅನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರಿಗೆ ಟೆಡ್ಡಿ (ಗೊಂಬೆ) ಅನ್ನು ಉಡುಗೊರೆಯಾಗಿ ನೀಡುವುದು ವಿಶೇಷ.
ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ನಡೆಸುವ ಹಬ್ಬ ಅಥವಾ ಆಚರಣೆ ವ್ಯಾಲೆಂಟೈನ್ಸ್ ಡೇ. 'ಪ್ರೇಮಿಗಳ ದಿನ' ಎಂದು ಕರೆದರೂ, ಜಗತ್ತಿನಾದ್ಯಂತ ಒಂದು ಇಡೀ ವಾರ ಆಚರಿಸುವ ಪ್ರೀತಿಸುವವರ ಹಬ್ಬವಾಗಿದೆ.
ಪ್ರತಿ ವರ್ಷ ಫೆಬ್ರುವರಿ 7ರಿಂದ 14ರವರೆಗೂ 'ವ್ಯಾಲೆಂಟೈನ್ಸ್ ವೀಕ್' ಎಂದು ಆಚರಿಸಲಾಗುತ್ತದೆ. ಪ್ರೇಮಿಗಳಿಗೆ ಈ ವಾರದ ಒಂದೊಂದು ದಿನವೂ ವಿಶೇಷ ದಿನ ಎಂದರೆ ತಪ್ಪಾಗುವುದಿಲ್ಲ. ಇಂದು (ಫೆಬ್ರುವರಿ 10) ಪ್ರೀತಿಸುವ ಎಲ್ಲ ಮನಸುಗಳಿಗೂ ನೆಚ್ಚಿನ ದಿನ 'ಟೆಡ್ಡಿ ಡೇ'.
ಸದಾ ನೆನಪಿನಲ್ಲಿ ಉಳಿಯುವಂತಹ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸುವ ಸಂಕೇತವಾಗಿ ‘ಟೆಡ್ಡಿ’ ಬಳಸಲಾಗುತ್ತದೆ.
‘ಟೆಡ್ಡಿ’ ಬಣ್ಣ ಯಾವ ಸಂದೇಶ ರವಾನಿಸುತ್ತದೆ?
ನಿಮ್ಮ ಸಂಗಾತಿಗೆ ಟೆಡ್ಡಿ ಅನ್ನು ಉಡುಗೊರೆಯಾಗಿ ನೀಡುವ ಮೊದಲು, ಯಾವ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ಖಚಿತಪಡಿಸಿಕೊಳ್ಳಿ.
ಕೆಂಪು ಟೆಡ್ಡಿ: ಕೆಂಪು ಬಣ್ಣ ಪ್ರೀತಿಯ ಸಂಕೇತವಾಗಿದೆ. ನಿಮ್ಮ ಸಂಗಾತಿಯೊಂದಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸಿದರೆ ಕೆಂಪು ಟೆಡ್ಡಿ ಬೇರ್ ನೀಡುವುದು ಉತ್ತಮ ಮಾರ್ಗ.
ಬಿಳಿ ಟೆಡ್ಡಿ: ಬಿಳಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನೀವು ಈಗಾಗಲೇ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದೀರಿ ಎಂದರ್ಥ. ಬಿಳಿ ಟೆಡ್ಡಿಯನ್ನು ಸ್ನೇಹದ ಸಂಕೇತವಾಗಿ ನೀಡಲಾಗುತ್ತಿದೆ.
ಕಪ್ಪು ಟೆಡ್ಡಿ: ನಿಮ್ಮ ಸಂಗಾತಿಯಿಂದ ಕಪ್ಪು ಬಣ್ಣದ ಟೆಡ್ಡಿ ಬೇರ್ ಪಡೆದರೆ ಅವರು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ.
ನೀಲಿ ಟೆಡ್ಡಿ: ನೀಲಿ ಬಣ್ಣ ಬದ್ಧತೆ ಮತ್ತು ಭರವಸೆಗಳ ಸಂಕೇತವಾಗಿದೆ. ನೀಲಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಸಂಗಾತಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ಎಂದರ್ಥ.
ಕಿತ್ತಳೆ ಟೆಡ್ಡಿ: ಕಿತ್ತಲೆ ಬಣ್ಣ ಸಂತೋಷ, ಭರವಸೆ ಮತ್ತು ಬೆಳಕನ್ನು ಸಂಕೇತಿಸುತ್ತದೆ. ನಿಮ್ಮ ಸಂಗಾತಿಗೆ ಅದನ್ನು ಉಡುಗೊರೆಯಾಗಿ ನೀಡಿ ಮತ್ತು ಅವರು ನಿಮ್ಮ ಜೀವನದಲ್ಲಿ ಎಷ್ಟು ಸಂತೋಷವನ್ನು ತಂದಿದ್ದಾರೆಂದು ಅವರಿಗೆ ತಿಳಿಸಿ.
ಹಸಿರು ಟೆಡ್ಡಿ: ಹಸಿರು ಬಣ್ಣವನ್ನು ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಜೀವನದಲ್ಲಿ ಯಾರಾದರೂ ಬರುತ್ತಾರೆ ಎಂದು ನೀವು ಕಾಯುತ್ತಿದ್ದೀರಿ ಎಂದರ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.