ADVERTISEMENT

ಪ್ರಜಾವಾಣಿ 'ವ್ಯಾಲೆಂಟೈನ್ಸ್ ಡೇ' ಲೇಖನ ಸ್ಫರ್ಧೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:01 IST
Last Updated 18 ಫೆಬ್ರುವರಿ 2020, 10:01 IST
ಪ್ರಜಾವಾಣಿ ಕಚೇರಿಯಲ್ಲಿ ಸ್ಫರ್ಧೆಗೆ ಬಂದ ಲೇಖನಗಳನ್ನು ಪರಿಶೀಲಿಸುತ್ತಿರುವ ವಿ.ಮನೋಹರ್ ಮತ್ತು ವೇಣಿ
ಪ್ರಜಾವಾಣಿ ಕಚೇರಿಯಲ್ಲಿ ಸ್ಫರ್ಧೆಗೆ ಬಂದ ಲೇಖನಗಳನ್ನು ಪರಿಶೀಲಿಸುತ್ತಿರುವ ವಿ.ಮನೋಹರ್ ಮತ್ತು ವೇಣಿ   

ಬೆಂಗಳೂರು: ಪ್ರೇಮಿಗಳ ದಿನ 'ವ್ಯಾಲೆಂಟೈನ್ಸ್ ಡೇ' ಪ್ರಯುಕ್ತ Prajavani.net ಜಾಲತಾಣವು 'ಮೊದಲ ಪ್ರೇಮ ನಿವೇದನೆ'ಯ ನೆನಪು ಹಂಚಿಕೊಳ್ಳಲು ಓದುಗರಿಗಾಗಿ ಏರ್ಪಡಿಸಿದ್ದ ಕಿರು ಲೇಖನ ಸ್ಫರ್ಧೆಯ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಬಂದಿರುವ ನೂರಾರು ಲೇಖನಗಳಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವುದು 14 ಲೇಖನಗಳು. ಅವುಗಳಲ್ಲಿ ಉತ್ತಮವಾದ 3 ಬರಹಗಳನ್ನು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಮತ್ತು ವೇಣಿ ದಂಪತಿ ಪ್ರಜಾವಾಣಿ ಕಚೇರಿಯಲ್ಲಿ ಆಯ್ಕೆ ಮಾಡಿದರು.

ತುಮಕೂರು ವಿವಿಯ ಉಮೇಶ ರೈತನಗರ ಅವರ 'ವಾರ್ಷಿಕೋತ್ಸವ ವೇದಿಕೆಯಲ್ಲಿ ಪ್ರೇಮ ನಿವೇದನೆ', ಗಂಗಾವತಿಯ ಶರಣಯ್ಯ ಕೆ.ಹಿರೇಮಠ ಅವರ 'ಕನಸೋ ಇದು, ನನಸೋ ಇದು' ಮತ್ತು ಚಿಂತಾಮಣಿ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸದಾಶಿವ ಸೊರಟೂರು ಅವರ ನವಿರಾದ ಬರಹಗಳು ಬಹುಮಾನಕ್ಕೆ ಪಾತ್ರವಾಗಿವೆ. ವಿಜೇತರು 'ಅಮೆಜಾನ್ ಇಕೋ ಡಾಟ್' ಸ್ಮಾರ್ಟ್ ಸ್ಪೀಕರ್ ಪಡೆಯಲಿದ್ದಾರೆ. ಬಹುಮಾನಕ್ಕೆ ಅರ್ಹವಾದ ಲೇಖನಗಳ ಲಿಂಕ್ ಈ ಕೆಳಗಿನಂತಿವೆ.

ADVERTISEMENT

1. ಉಮೇಶ್ ರೈತನಗರಬರೆದ ಲೇಖನ
2. ಶರಣಯ್ಯ ಕೆ. ಹಿರೇಮಠಬರೆದ ಲೇಖನ
3. ಸದಾಶಿವ ಸೊರಟೂರುಬರೆದ ಲೇಖನ

ಫೆ.1ರಿಂದ ಫೆ.10ವರೆಗೆ ಲೇಖನಗಳನ್ನು ಕಳುಹಿಸಲು ಅವಕಾಶವಿತ್ತು. ಅದರ ಬಳಿಕಬಂದಿರುವ ಲೇಖನಗಳನ್ನು ಪರಿಗಣಿಸಲಾಗಿಲ್ಲ.

ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲ 14 ಲೇಖನಗಳನ್ನು ಯುವ ವಿಭಾಗದಲ್ಲಿ ಇಲ್ಲಿ ಪ್ರಕಟಿಸಲಾಗಿದೆ.

ಇದೇ ಸಂದರ್ಭದಲ್ಲಿ, ವಿ.ಮನೋಹರ್ - ವೇಣಿ ದಂಪತಿ ತಮ್ಮ ಪ್ರೇಮಮಯ ದಿನಗಳನ್ನು ಪ್ರಜಾವಾಣಿ ಓದುಗರಿಗಾಗಿ ನೆನಪಿಸಿಕೊಂಡಿದ್ದಾರೆ. ಅದರ ವಿಡಿಯೊ ನಾಳೆ (ಬುಧವಾರ) ಪ್ರಕಟವಾಗಲಿದೆ. ಟೀಸರ್ ಇಲ್ಲಿದೆ.

ವಿಜೇತರಿಗೆಲ್ಲರಿಗೂ ಅಭಿನಂದನೆಗಳು, ಉತ್ಸಾಹದಿಂದ ಈ ಲೇಖನ ಸ್ಫರ್ಧೆಯಲ್ಲಿ ಭಾಗವಹಿಸಿದವರಿಗೆ ತುಂಬು ಹೃದಯದ ಧನ್ಯವಾದಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.