ADVERTISEMENT

Hug Day 2022: ‘ಹಗ್‌ ಡೇ’ ಸಂಗಾತಿಗಳ ಬಾಂಧವ್ಯ ಗಟ್ಟಿಗೊಳಿಸಲಿದು ಸುದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2022, 6:52 IST
Last Updated 12 ಫೆಬ್ರುವರಿ 2022, 6:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರೇಮಿಗಳ ವಾರದ ಆರನೇ ದಿನ ಅಂದರೆ ಫೆಬ್ರುವರಿ 12ರಂದು ‘ಹಗ್‌ ಡೇ’ (ಅಪ್ಪುಗೆಯ ದಿನ) ಎಂದು ಆಚರಿಸಲಾಗುತ್ತದೆ. ‘ಅಪ್ಪುಗೆ’ ಎಂಬುದು ಬಾಂಧವ್ಯ ಬೆಸುಗೆಯಲ್ಲಿ ಮಹತ್ವದ ಹೆಜ್ಜೆ.

ಅದು ತಂದೆ –ತಾಯಿ ಅಪ್ಪುಗೆಯಾಗಿರಬಹುದು, ಗೆಳೆಯ, ಗೆಳತಿ, ಸಂಗಾತಿಯ ಬೆಸುಗೆಯಾಗಿರಬಹುದು. ಅಪ್ಪುಗೆಯು ಆಯಾ ಸಂಬಂಧಗಳ ಗಾಢತೆಯ ಪ್ರತೀಕವಾಗಿದೆ.

ಒಂದು ಅಪ್ಪುಗೆಯು ಪ್ರೀತಿ, ಕಾಳಜಿ, ಸಂತೋಷ, ದುಃಖ, ನಂಬಿಕೆಯಿಂದ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ.

ADVERTISEMENT

ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ನಡೆಸುವ ಹಬ್ಬ ಅಥವಾ ಆಚರಣೆ‌ ವ್ಯಾಲೆಂಟೈನ್ಸ್ ಡೇ. 'ಪ್ರೇಮಿಗಳ ದಿನ' ಎಂದು ಕರೆದರೂ, ಜಗತ್ತಿನಾದ್ಯಂತ ಒಂದು ಇಡೀ ವಾರ ಆಚರಿಸುವ ‘ಪ್ರೇಮಿಗಳ ಹಬ್ಬವಾಗಿದೆ’.

ಪ್ರತಿ ವರ್ಷ ಫೆಬ್ರುವರಿ 7ರಿಂದ 14ರವರೆಗೂ 'ವ್ಯಾಲೆಂಟೈನ್ಸ್ ವೀಕ್‌' ಎಂದು ಆಚರಿಸಲಾಗುತ್ತದೆ. ಪ್ರೇಮಿಗಳಿಗೆ ಈ ವಾರದ ಒಂದೊಂದು ದಿನವೂ ವಿಶೇಷ ದಿನ ಎಂದರೆ ತಪ್ಪಾಗುವುದಿಲ್ಲ. ಇಂದು (ಫೆಬ್ರುವರಿ 12) ಪ್ರೀತಿಸುವ ಎಲ್ಲ ಮನಸುಗಳಿಗೂ ನೆಚ್ಚಿನ ದಿನ ‘ಹಗ್‌ ಡೇ’.

ಅಪ್ಪುಗೆಯ ದಿನವು ಪ್ರೇಮಿಗಳ ವಾರದ ಆಚರಣೆಯ ಭಾಗವಾಗಿದೆ. ಪ್ರತಿ ವರ್ಷ ಫೆಬ್ರುವರಿ 12ರಂದು ‘ಹಗ್‌ ಡೇ’ ಆಚರಿಸಲಾಗುತ್ತದೆ. ಈ ದಿನದಂದು ಸಂಗಾತಿಗಳು ತಮ್ಮ ಬೆಚ್ಚಗಿನ ಅಪ್ಪುಗೆಯೊಂದಿಗೆ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.

ಅಪ್ಪುಗೆಯ ಮಹಿಮೆ ಇದಿಷ್ಟೇ ಅಲ್ಲ. ಸಂಬಂಧವನ್ನು ಉದ್ದೀಪನಗೊಳಿಸುವುದು ಅಥವಾ ಬಾಂಧವ್ಯದ ಭಾವವನ್ನು ಮತ್ತಷ್ಟು ಬಿಗಿಗೊಳಿಸುವ ಶಕ್ತಿಯನ್ನೂ ಅಪ್ಪುಗೆ ಹೊಂದಿದೆ ಎಂದರೆ ತಪ್ಪಲ್ಲ.

ವೈಜ್ಞಾನಿಕ ಅಧ್ಯಯನ ಪ್ರಕಾರ ಅಪ್ಪುಗೆಯಿಂದ ಅನೇಕ ಪ್ರಯೋಜನಗಳು ಸಿಗುವುದಾಗಿ ತಿಳಿದುಬಂದಿದೆ. ಇದು ಒತ್ತಡದ ಕಾರ್ಟಿಸೋಲ್‌ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುವುದು ಸಹಾಯಕವಾಗುತ್ತದೆ.

ಅಪ್ಪುಗೆಯ ಮಹತ್ವ ಏನು?
ಅಪ್ಪುಗೆಯಿಂದ ಸಂಬಂಧಗಳ, ಗೆಳೆತನಗಳ ಮೇಲೆ ತುಂಬಾ ಗಾಢವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ, ದುಃಖಿತರಾದಾಗ ಸಾಂತ್ವನ ಹೇಳಲು ಅಪ್ಪುಗೆಗಿಂತ ದೊಡ್ಡದಾದ ಭಾವ ಮತ್ತೊಂದಿಲ್ಲ. ಅದಲ್ಲದೆ, ಪ್ರೀತಿಯ ಅಪ್ಪುಗೆಯು ನವೋಲ್ಲಾಸ, ಸಮಾಧಾನ ಮೂಡಲು ನೆರವಾಗುತ್ತದೆ.

ಅಪ್ಪುಗೆಯಿಂದ ಆಗುವ ಉಪಯೋಗಗಳು...

* ಅಪ್ಪುಗೆಯು ಕಾರ್ಟಿಸೋಲ್ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಒತ್ತಡದ ಸಂದರ್ಭಗಳಲ್ಲಿ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಅಪ್ಪುಗೆಯು ರಾತ್ರಿಯ ನಿದ್ರೆಗೆ ಸಹಾಯ ಮಾಡುತ್ತದೆ.

* ಅಪ್ಪುಗೆಯು ಮೆದುಳಿನಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಅದು ನಮ್ಮನ್ನು ಸಂತೋಷ, ಸಕ್ರಿಯ ಮತ್ತು ಶಾಂತಗೊಳಿಸುತ್ತದೆ.

* ಅಪ್ಪಿಕೊಳ್ಳುವುದರಿಂದ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗುತ್ತದೆ.

* ಅಪ್ಪಿಕೊಳ್ಳುವುದು ನಾವು ಸುರಕ್ಷಿತವಾಗಿರುತ್ತೇವೆ. ಪರಸ್ಪರ ಪ್ರೀತಿಸುತ್ತೇವೆ ಮತ್ತು ಒಬ್ಬಂಟಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

* ಅಪ್ಪಿಕೊಳ್ಳುವುದರಿಂದ ಮನಸ್ಸಿನ ನೋವಿನ ವಿರುದ್ಧ ಹೋರಾಡುವ ಮೂಲಕ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.