Chandrayaan 3 | ಚಂದ್ರಯಾನ 3 ಉಡ್ಡಯನ; ನಭಕ್ಕೆ ಚಿಮ್ಮಿತು ರಾಕೆಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಕಕ್ಷೆ ಸೇರಿದ ಚಂದ್ರಯಾನ-3: ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ

ಒಡಿಶಾದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಪುರಿಯಲ್ಲಿ ಮರಳಿನಲ್ಲಿ ರಚಿಸಿರುವ ಚಂದ್ರಯಾನ-3 ಚಿತ್ರ

ಚಂದ್ರನ ಮೇಲ್ಮೈಯಲ್ಲಿ ಅಧ್ಯಯನ ಯೋಜನೆಯ ಉದ್ದೇಶ.

ಸತೀಶ್‌ ಧವನ್ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ಶುಕ್ರವಾರ ಮಧ್ಯಾಹ್ನ 2.35 ಗಂಟೆಗೆ ನಭಕ್ಕೆ ಚಿಮ್ಮಿತು.

ಈ ಬಾರಿ ವಿಜ್ಞಾನಿಗಳು ‘ಸಾಫ್ಟ್‌ ಲ್ಯಾಂಡಿಂಗ್‌’ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ.

ಚಂದ್ರನಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವಂತೆ ಮಾಡುವುದು ಸವಾಲಿನ ಕಾರ್ಯವಾಗಿದೆ.

ಈ ಬಾರಿಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ‘ಸಾಫ್ಟ್‌ ಲ್ಯಾಂಡಿಂಗ್’ನಲ್ಲಿ ಯಶಸ್ಸು ಸಿಕ್ಕಲ್ಲಿ, ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ.

ಭಾರತದ ‘ಚಂದ್ರಯಾನ’ ಕಾರ್ಯಕ್ರಮಕ್ಕೆ ಎರಡು ದಶಕಗಳು ಸಂದಿವೆ. 

ಭಾರತದ ಹೆಮ್ಮೆ - ಚಂದ್ರಯಾನ-3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.