ನಿಮ್ಮ ಮನೆಯ ಕಪಾಟಿನಲ್ಲಿ ಬಿಳಿ ಬಣ್ಣದ ಬಳಸದೇ ಇರುವ ಬಟ್ಟೆಗಳಿವೆಯೇ? ಅವನ್ನು ಬಳಸುವ ಇಚ್ಛೆ ಇದ್ದರೂ ಅವು ಹಳೆಯದಾಗಿವೆ ಎಂಬ ಕಾರಣಕ್ಕೆ ಅದನ್ನು ಸುಮ್ಮನೆ ಮಡಿಸಿ ಮೂಲೆಯಲ್ಲಿ ಇಟ್ಟಿದ್ದೀರಾ? ಹಾಗಾದರೆ ಅದಕ್ಕೆ ರಂಗು ಬಳಿದು ಹೊಸದರಂತೆ ಉಪಯೋಗಿಸಬಹುದು. ಈ ವಿಧಾನವೇ ಟೈ ಅಂಡ್ ಡೈ.

ಟೈ ಅಂಡ್ ಡೈಯಿಂಗ್ ಎಂದರೆ ಬಟ್ಟೆಯ ಮೇಲೆ ರಂಗುರಂಗಿನ ವಿನ್ಯಾಸವನ್ನು ರಚಿಸುವ ಪ್ರಕ್ರಿಯೆ. ಇದರ ವಿನ್ಯಾಸವು ನೀವು ಬಟ್ಟೆಯನ್ನು ಹೇಗೆ ಒಟ್ಟು ಸೇರಿಸುತ್ತೀರಿ ಹಾಗೂ ಹೇಗೆ ಮಡಿಸಿ ಕಟ್ಟುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಒಮ್ಮೆ ನೀವು ಬಟ್ಟೆಯನ್ನು ಬಣ್ಣದಲ್ಲಿ ಮುಳುಗಿಸಿದ ಮೇಲೆ ಬಿಸಿಲಿನಲ್ಲಿ ಒಣಗಲು ಬಿಡಿ. ಟೀ ಶರ್ಟ್, ಷಾರ್ಟ್ಸ್, ಡ್ರೆಸ್, ದುಪಟ್ಟಾ, ಸ್ಟೋಲ್ ಹೀಗೆ ಬಟ್ಟೆಯ ಮೇಲೆ ಬಣ್ಣದ ವಿನ್ಯಾಸವೂ ಮೂಡಿರುತ್ತದೆ.

ಸುರಳಿಗಳು: ಮೊದಲು ಬಟ್ಟೆಯನ್ನು ಟೇಬಲ್ ಮೇಲೆ ಹರಡಿ. ನಿಮ್ಮ ಬೆರಳನ್ನು ಮಧ್ಯದಲ್ಲಿ ಇಟ್ಟು ಬಟ್ಟೆ ಸುರುಳಿಯಾಕಾರಕ್ಕೆ ಬರುವವರೆಗೂ ಬೆರಳನ್ನು ತಿರುಗಿಸುತ್ತಿರಿ. ಎಲ್ಲವೂ ಒಂದೇ ಆಕಾರದಲ್ಲಿ ಇರುವಂತೆ ರಬ್ಬರ್ ಬ್ಯಾಂಡ್ ಅಳವಡಿಸಿ.

ಪಟ್ಟೆಗಳು: ಪಟ್ಟೆ ವಿನ್ಯಾಸ ಬೇಕೆಂದರೆ ಬಟ್ಟೆಯನ್ನು ಕೆಳಗಿನಿಂದ ಮೇಲಿನವರೆಗೆ ಸುತ್ತಿಕೊಳ್ಳಿ. ಲಂಬವಾದ ಪಟ್ಟೆಗಳು ಬೇಕು ಎಂದರೆ ಉದ್ದನೆಯ ಕೊಳವೆಯನ್ನು ಸುತ್ತಬೇಕು. ಅಗಲವಾದ ಪಟ್ಟೆಗಳು ಬೇಕು ಎನ್ನಿಸಿದರೆ ವಿರುದ್ಧ ದಿಕ್ಕಿನಲ್ಲಿ ಬಟ್ಟೆಯನ್ನು ಮಡಿಸಬೇಕು. ಪಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ರಬ್ಬರ್ ಬ್ಯಾಂಡ್ಗಳನ್ನು ಬಳಸಿ.

ಹಿಸುಕುವುದು: ಇದು ಅತಿ ಸರಳ ವಿಧಾನ. ಇದರಲ್ಲಿ ವಿನ್ಯಾಸಗಳು ಸುಲಭವಾಗಿ ಆಗುತ್ತವೆ. ಬಟ್ಟೆಯನ್ನು ಹಿಸುಕಿ ಚೆಂಡಿನಾಕಾರಕ್ಕೆ ತನ್ನಿ. ನಂತರ ರಬ್ಬರ್ ಬ್ಯಾಂಡ್ ಸುತ್ತಿ.

ಬೇಕಾಗುವ ಸಾಮಗ್ರಿ
ಬಿಳಿ ಬಟ್ಟೆ, ಫುಡ್ ಕಲರ್, ಬಿಳಿ ಕೈಗವಸು, ಸ್ಕ್ವೀಝ್ ಬಾಟಲ್, ರಬ್ಬರ್ ಬ್ಯಾಂಡ್, ದೊಡ್ಡ ಬಕೆಟ್, ಪ್ಲಾಸ್ಟಿಕ್ ಶೀಟ್ಗಳು, ಜಿಪ್ ಇರುವ ಬ್ಯಾಗ್, ಬಿಳಿ ವಿನೆಗರ್ ಹಾಗೂ ನೀರು.

ಟೈ–ಡೈ ಫೋಲ್ಡಿಂಗ್ ವಿಧಾನ
1 ಬಟ್ಟೆಯನ್ನು ಸಿದ್ಧಗೊಳಿಸಿಕೊಳ್ಳುವುದು: ಮೊದಲು ಬಟ್ಟೆಯನ್ನು ನೀರು ಹಾಗೂ ಬಿಳಿ ವಿನೆಗರ್ನಲ್ಲಿ ಒಂದು ಗಂಟೆ ನೆನೆಸಿಡಿ. ವಿನೆಗರ್ ಬಣ್ಣವು ಬಟ್ಟೆಗೆ ಹಿಡಿಯಲು ಸಹಾಯ ಮಾಡುತ್ತದೆ. ಬಕೆಟ್ಗೆ ವಿನೆಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಸುರಿಯಿರಿ. ದೊಡ್ಡವರ ಬಟ್ಟೆಗೆ ತಲಾ ಎರಡು ಕಪ್ ನೀರು ಹಾಗೂ ವಿನೆಗರ್ ಬೇಕು. .

2 ಟೈ–ಡೈನಲ್ಲಿ ಟೈ ಹಾಕುವುದು ಹೇಗೆ?: ಒಂದು ಗಂಟೆ ನೆನೆಸಿದ ಬಳಿಕ ಬಟ್ಟೆಯಿಂದ ನೀರನ್ನು ಹಿಂಡಿ. ಬಳಿಕ ನಿಮ್ಮ ಕ್ರಿಯಾಶೀಲತೆಗೆ ತಕ್ಕಂತೆ ಬಟ್ಟೆಯ ಮೇಲೆ ವಿನ್ಯಾಸ ಮಾಡಿ. ರಬ್ಬರ್ ಬ್ಯಾಂಡ್ ಬಳಸುವ ಮೂಲಕ ಸುರುಳಿ, ಪಟ್ಟಿ ಹೀಗೆ ಯಾವ ಆಕಾರಕ್ಕೆ ಬೇಕಾದರೂ ಮಾಡಿಕೊಳ್ಳಬಹುದು.

3 ಬಣ್ಣ ಸಿದ್ಧಪಡಿಸುವುದು: ಸ್ಕ್ವೀಝ್ ಬಾಟಲ್ನಲ್ಲಿ ಅರ್ಧ ನೀರು ತುಂಬಿ. ಅದಕ್ಕೆ ನಿಮ್ಮ ಇಷ್ಟದ ಫುಡ್ ಕಲರ್ ಸೇರಿಸಿ. ನೈಸರ್ಗಿಕ ಬಣ್ಣಗಳಾದ ಅರಿಸಿನ, ಬೀಟ್ರೂಟ್ ಅಥವಾ ಕಾಫಿ ಬಳಸಬಹುದು.

4.ಪ್ಲಾಸ್ಟಿಕ್ ಶೀಟ್ ಅನ್ನು ಹರಡಿ.ಕೈಗವಸು ಧರಿಸಿ ರಬ್ಬರ್ ಬ್ಯಾಂಡ್ನ ಸಹಾಯದಿಂದ ನಿಮಗೆ ಬೇಕಾದ ಆಕಾರಕ್ಕೆ ರಂಗು ಬಳಿಯಿರಿ. ಹಿಂದೆ ಹಾಗೂ ಮುಂದೆ ಎರಡೂ ಕಡೆ ಒಂದೇ ಬಣ್ಣ ಬಳಸಬೇಕು. ನಿಮಗೆ ಏಕರೂಪದ ವಿನ್ಯಾಸ ಬೇಡವೆಂದರೆ ನೀವು ಬೇರೆ ರೀತಿ ಮಾಡಬಹುದು.

5. ಡೈ ಮಾಡಿರುವ ಬಟ್ಟೆಯನ್ನು ರಬ್ಬರ್ ಬ್ಯಾಂಡ್ ಜೊತೆಗೆ ತೆಗೆದುಕೊಳ್ಳಿ. ಜಿಪ್ ಇರುವ ಬ್ಯಾಗ್ನಲ್ಲಿ ಹಾಕಿ 8 ಗಂಟೆಗಳ ಕಾಲ ಒಣಗಲು ಬಿಡಿ. ಬಣ್ಣ ಒಣಗಿದ ಮೇಲೆ ಬ್ಯಾಗ್ನಿಂದ ತೆಗೆದು ರಬ್ಬರ್ ಬ್ಯಾಂಡ್ ಕತ್ತರಿಸಿ ಹಾಕಿ.

6. ರೆಡಿ ಮಾಡಿಕೊಂಡ ಬಟ್ಟೆ ಹೊಂದಿಕೊಳ್ಳಲು ನೀರು ಹಾಗೂ ಉಪ್ಪು ಮಿಶ್ರಿತ ನೀರಿನಲ್ಲಿ ಮುಳುಗಿಸಿ. 120 ಮಿಲಿ ಲೀಟರ್ ನೀರಿಗೆ 150 ಗ್ರಾಂ ಉಪ್ಪು ಸೇರಿಸಿ. ನಂತರ ತಣ್ಣೀರಿನಿಂದ ತೊಳೆಯಿರಿ.

7.ಈಗ ನಿಮ್ಮ ಡೈ ಮಾಡಿದ ಹೊಸ ಬಟ್ಟೆಯನ್ನು ಒಣಗಲು ಹಾಕಿ. ಒಮ್ಮೆ ಒಣಗಿದ ಮೇಲೆ ಧರಿಸಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.