ದುಬೈನಲ್ಲಿ ಮಾಂಸಾಹಾರ ಬಿಟ್ಟಿದ್ದು...
ಇದು 13 ವರ್ಷಗಳ ಹಿಂದಿನ ಮಾತು. ಅಂದು ನಾನು ದುಬೈನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ದುಬೈ ನಗರ ನಿಜಕ್ಕೂ ವಿಸ್ಮಯಕಾರಿಯಾಗಿತ್ತು. ಇಲ್ಲಿ ಏನುಂಟು.....ಏನಿಲ್ಲ....? ಮುಸ್ಲಿಂ ರಾಷ್ಟ್ರವಾದರೂ, ಆಧುನಿಕತೆಯ ಎಲ್ಲ ಅಂಶಗಳನ್ನು ಒಳಗೊಂಡಿರುವ ನಗರ. ನಮ್ಮ ದೇಶದಲ್ಲಿ ದೆಹಲಿ-ರಾಜಧಾನಿ, ಮುಂಬೈ ಆರ್ಥಿಕ ರಾಜಧಾನಿ ಮತ್ತು ಬೆಂಗಳೂರು ಐಟಿ. ಬಿ.ಟಿ ರಾಜಧಾನಿಯಾಗಿರುವಂತೆ, ಯು.ಎ,ಇ ಎನ್ನುವ ದೇಶದಲ್ಲಿ ಅಬುಧಾಬಿ ರಾಜಧಾನಿ, ದುಬೈ ಆರ್ಥಿಕ ರಾಜಧಾನಿ ಹಾಗೂ ಅಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಶಾರ್ಜಾ ಆ ದೇಶದ ಸಾಂಸ್ಕೃತಿಕ ರಾಜಧಾನಿ.Last Updated 11 ಸೆಪ್ಟೆಂಬರ್ 2015, 19:30 IST