ಒಳನೋಟ | ಹರಿವಾಣ ತುಂಬಿದ ತೆನೆ: ರಾಗಿಭಗೀರಥನ ಯಶೋಗಾಥೆ
ಮಳೆಯಾಶ್ರಿತ ಸಣ್ಣ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದು ಬಂದ ವಿನೀತ ರಾಗಿಗಿಂದು ಜಾಗತಿಕ ಮನ್ನಣೆ ಸಂದಿದೆ. ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ರಾಗಿಯ ಉದ್ಧಾರಕ್ಕೆ ಪಣತೊಟ್ಟು ಲಕ್ಷ್ಮಣಯ್ಯನವರಂತಹ ಒಬ್ಬ ಮೇಧಾವಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಧೀರಗಾಥೆ ಇದರ ಹಿಂದಿದೆ.Last Updated 9 ಜುಲೈ 2022, 20:15 IST