ನೂತನ ಸಫಾರಿಯ ಡ್ಯುಯಲ್ ಟೋನ್ ಇಂಟೀರಿಯರ್. ಆಶ್‌ವುಡ್ ಡ್ಯಾಶ್‌ಬೋರ್ಡ್ ಮತ್ತು 8.8 ಇಂಚಿನ ಇನ್ಫೊಟೈನ್‌ಮೆಂಟ್ ಸಿಸ್ಟಂ ನೂತನ ಸಫಾರಿಯ ಆಕರ್ಷಣೆಗಳಲ್ಲಿ ಒಂದು. ಜೆಬಿಲ್‌ನ ನಾಲ್ಕು ಸ್ಪೀಕರ್, ನಾಲ್ಕು ಟ್ವೀಟರ್ ಮತ್ತು ಒಂದು ಸಬ್‌ವೂಫರ್ ಇರುವ ಹರ್ಮಾನ್ ಇನ್ಫೊಟೈನ್‌ಮೆಂಟ್ ಸಿಸ್ಟಂ ತನ್ನ ವರ್ಗದಲ್ಲೇ ಅತ್ಯುತ್ತಮ ಎನಿಸಿದೆ. ಈ ವರ್ಗದ ಬೇರೆ ಯಾವ ವಾಹನಗಳಲ್ಲೂ ಇಷ್ಟು ಉತ್ತಮವಾದ ಮ್ಯೂಸಿಕ್ ಸಿಸ್ಟಂ ಈಗ ಲಭ್ಯವಿಲ್ಲ.
ನೂತನ ಸಫಾರಿಯಲ್ಲಿ ಆರು ಏರ್‌ಬ್ಯಾಗ್‌ಗಳ ಸುರಕ್ಷತಾ ಸವಲತ್ತು ಲಭ್ಯವಿದೆ. ಸಫಾರಿಯು ಆರು ಮತ್ತು ಏಳು ಸೀಟುಗಳ ಅವತರಣಿಕೆಯಲ್ಲಿ ಲಭ್ಯವಿದೆ
ನೂತನ ಸಫಾರಿಯ ಮೆಜೆಸ್ಟಿಕ್ ಸ್ಕೈಡೋಂ ಪನರೋಮಿಕ್ ಸನ್‌ರೂಫ್. ಇದು ತನ್ನ ವರ್ಗದಲ್ಲೇ ಅತ್ಯಂತ ವಿಶಾಲವಾದ ಸನ್‌ರೂಫ್ ಎಂದು ಟಾಟಾ ಮೋಟರ್ಸ್ ಹೇಳಿದೆ
ನೂತನ ಸಫಾರಿಯು ಮುಂಬದಿಯಿಂದ ಟಾಟಾ ಮೋಟರ್ಸ್‌ನ ಹ್ಯಾರಿಯರ್ ಎಸ್‌ಯುವಿಯನ್ನೇ ಹೋಲುತ್ತದೆ. ಗ್ರಿಲ್‌ನ ವಿನ್ಯಾಸದಲ್ಲಿ ಮಾತ್ರ ತುಸು ಬದಲಾವಣೆ ಮಾಡಲಾಗಿದೆ
ಟಾಟಾ ಸಫಾರಿಯು ಫ್ರಂಟ್ ವ್ಹೀಲ್ ಡ್ರೈವ್ ಎಸ್‌ಯುವಿ ಆಗಿದ್ದರೂ, ಸಣ್ಣ ಪ್ರಮಾಣದ ಆಫ್‌ರೋಡಿಂಗ್ ಸಾಧ್ಯವಿದೆ. ಕಚ್ಚಾರಸ್ತೆಗಳಲ್ಲಿ, ಕೆಸರಿನಲ್ಲಿ, ಸಣ್ಣಪುಟ್ಟ ಬಂಡೆಗಲ್ಲುಗಳನ್ನು ಹತ್ತಲು ನೂತನ ಸಫಾರಿ ಶಕ್ತವಾಗಿದೆ. ಲ್ಯಾಂಡ್ ರೋವರ್‌ನ ಐಕಾನಿಕ್ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಇರುವ ಕಾರಣ ಸಫಾರಿಯಲ್ಲಿ ಆಫ್‌ರೋಡಿಂಗ್ ಸಾಧ್ಯ. ಟೆಸ್ಟ್‌ಡ್ರೈವ್ ಭಾಗವಾಗಿ ಚಲಾಯಿಸಿದ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಸಫಾರಿಯು 15 ಇಂಚಿನಷ್ಟು ಎತ್ತರದ ಬಂಡೆಗಲ್ಲನ್ನು ಸುಲಭವಾಗಿ ಹತ್ತಿತು. ಹಿಂಬದಿಯ ಒಂದು ಚಕ್ರ ಗಾಳಿಯಲ್ಲಿ ತೇಲುತ್ತಿದ್ದರೂ ಹೆಚ್ಚು ಓಲಾಡದೆ ಈ ಸರ್ಕಸ್ ಅನ್ನು ಪೂರ್ಣಗೊಳಿಸಿತು