ನವದೆಹಲಿ: ಎಂಜಿ ಮೋಟರ್ ಇಂಡಿಯಾ ಕಂಪನಿಯು ಸುಧಾರಿತ ಜೆಡ್ಎಸ್ ಇವಿ ಅನ್ನು ದೇಶದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹ 20.99 ಲಕ್ಷ ಇದೆ.

ವಿದ್ಯುತ್ ಚಾಲಿತ ಜೆಡ್ ಎಸ್ನ 2021ರ ಆವೃತ್ತಿಯು 44.5 ಕಿಲೊವಾಟ್ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 419 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಟಯರ್, ಬ್ಯಾಟರಿ ಪ್ಯಾಕ್ ಹೊಂದಿದ್ದು, ಗ್ರೌಂಡ್ ಕ್ಲಿಯರನ್ಸ್ ಹೆಚ್ಚಿಸಲಾಗಿದೆ. 31 ನಗರಗಳಲ್ಲಿ ಬುಕಿಂಗ್ಗೆ ಅವಕಾಶ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

‘ಜೆಡ್ಎಸ್ ಬಿಡುಗಡೆ ಮಾಡಿದ ಒಂದು ವರ್ಷದ ಅಲ್ಪಾವಧಿಯಲ್ಲಿಯೇ ಸುಧಾರಿತ ಆವೃತ್ತಿ ಬಿಡುಗಡೆ ಮಾಡುವ ಮೂಲಕ ವಿದ್ಯುತ್ ಚಾಲಿತ ವಾಹನಗಳ ವಿಭಾಗದಲ್ಲಿ ನಮ್ಮ ಬದ್ಧತೆಯನ್ನು ಮುಂದುವರಿಸಿದ್ದೇವೆ’ ಎಂದು ಕಂಪನಿಯ ಭಾರತದ ಅಧ್ಯಕ್ಷ ರಾಜೀವ್ ಚಾಬಾ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.