ಹೈದರಾಬಾದ್ (ಪಿಟಿಐ): ತೆಲಂಗಾಣ ಮೂಲದ ಕಾರು ಮಾಲೀಕರೊಬ್ಬರು ₹25.50 ಲಕ್ಷ ಪಾವತಿಸಿ ತಮ್ಮ ಅಚ್ಚುಮೆಚ್ಚಿನ ‘9999’ ನೋಂದಣಿ ಸಂಖ್ಯೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ‘9999’ ನೋಂದಣಿ ಸಂಖ್ಯೆಯ ಮಾರಾಟಕ್ಕಾಗಿ ಸೋಮವಾರ ಆನ್ಲೈನ್ ಮೂಲಕ ಬಿಡ್ಡಿಂಗ್ ನಡೆಸಿತು. ಈ ಪ್ರಕ್ರಿಯೆಯಲ್ಲಿ 11 ಮಂದಿ ಪಾಲ್ಗೊಂಡಿದ್ದರು. ಕೊನೆಯದಾಗಿ ಈ ಸಂಖ್ಯೆಯು ಭರ್ಜರಿ ₹25.5 ಲಕ್ಷಕ್ಕೆ ಬಿಕರಿಯಾಯಿತು. ಈ ಮೂಲಕ ‘9999’ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಸಂಖ್ಯೆಯಾಗಿದೆ ಎಂದು ಹೈದರಾಬಾದ್ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸಿ. ರಮೇಶ್ ತಿಳಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ನಲ್ಲಿ ನಡೆದ ಆನ್ಲೈನ್ ಹರಾಜು ಪ್ರಕ್ರಿಯೆಯಲ್ಲಿ ‘9999’ ಸಂಖ್ಯೆಯು ₹21.6 ಲಕ್ಷಕ್ಕೆ ಮಾರಾಟವಾಗಿತ್ತು.

ಇಷ್ಟದ ನೋಂದಣಿ ಸಂಖ್ಯೆ ಪಡೆಯಲು ಇಚ್ಛಿಸುವವರು ₹50 ಸಾವಿರ ಮುಂಗಡವಾಗಿ ಪಾವತಿಸಿ, ತಮ್ಮ ಇಷ್ಟದ ಸಂಖ್ಯೆಯನ್ನು ಕಾಯ್ದಿರಿಸಿಕೊಳ್ಳಬಹುದು. ಆ ಮೂಲಕ ಆನ್ಲೈನ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.