ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ‘ತುಲಾ’ ಸರ್ಕಾರೇತರ ಸಂಸ್ಥೆಯು ಪರಿಸರಸ್ನೇಹಿ ಸಾವಯವ ಹತ್ತಿ ಬಟ್ಟೆಗಳ ಮೇಳವನ್ನು ಇದೇ 14ರಿಂದ ಆಯೋಜಿಸಿದೆ. ಎಲ್ಲ ಋತುಗಳಲ್ಲೂ ಧರಿಸಬಹುದಾದ ಸಾವಯವ ಹತ್ತಿ ಬಟ್ಟೆಗಳ ಪ್ರದರ್ಶನ ಇರಲಿದೆ.

ಸಾವಯವ ರೀತಿಯಲ್ಲಿ ಹತ್ತಿಯನ್ನು ಬೆಳೆದು, ಅದರ ಸಂಸ್ಕರಿಸಿ, ನೂಲು ತೆಗೆದು, ನೇಯುವಿಕೆ, ಬಣ್ಣ ನೀಡುವಿಕೆ ಹೀಗೆ ಎಲ್ಲವೂ ನೈಸರ್ಗಿಕ ಪ್ರಕ್ರಿಯೆಯಲ್ಲಿ ರೂಪುಗೊಂಡಿರುವ ಬಟ್ಟೆಗಳ ಪ್ರದರ್ಶನವೇ ಈ ಮೇಳದ ವಿಶೇಷ. ಯಂತ್ರಕ್ಕಿಂತಲೂ ಮನುಷ್ಯನ ಕೌಶಲಕ್ಕೆ ಆದ್ಯತೆ ಸಿಗಬೇಕು. ಸ್ವ ಉದ್ಯೋಗದಿಂದ ಸ್ವಾವಲಂಬನೆ. ಅಲ್ಲಿಂದಲೇ ಅಭಿವೃದ್ಧಿ ಎಂಬ ಧ್ಯೇಯೋದ್ದೇಶ ಈ ಮೇಳದ ಹಿಂದಿದೆ.

ಈ ಬಗ್ಗೆ ಸಂಸ್ಥೆಯ ಅನಂತಶಯನ ಅವರು ಹೇಳುವುದಿಷ್ಟು, ‘ನೈಸರ್ಗಿಕ ಬಣ್ಣ ಹಾಗೂ ನೈಸರ್ಗಿಕವಾಗಿ ಬೆಳೆದ ಹತ್ತಿಯ ಬಳಕೆಯ ಬಗ್ಗೆ ಮೇಳದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ’ ಎನ್ನುತ್ತಾರೆ ಅವರು.

ಹತ್ತಿ ಕೃಷಿಯಿಂದ ಬಟ್ಟೆ ನೇಯುವ ಹಂತದವರೆಗೆ ಸುಮಾರು 6 ರಿಂದ 8 ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ. ಈಗಷ್ಟೆ ಫ್ಯಾಷನ್ ಡಿಸೈನ್ ಕೋರ್ಸ್ ಮುಗಿಸಿ ಬಂದ ಯುವಸಮೂಹ ಟ್ರೆಂಡಿಗೆ ತಕ್ಕಂತೆ ವಿನ್ಯಾಸ ಮಾಡಿದ್ದಾರೆ. ಸದ್ಯಕ್ಕೆ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅಗತ್ಯವಿರುವ ಎಲ್ಲ ಬಗೆಯ ಉಡುಪುಗಳ ಪ್ರದರ್ಶನವು ಈ ಮೇಳದಲ್ಲಿ ಇರಲಿದೆ ಎನ್ನುವ ಮಾಹಿತಿ ಅವರದ್ದು.

ವಿಶೇಷ ಕಾರ್ಯಾಗಾರ:

15ರಂದು ಬೆಳಿಗ್ಗೆ 11.30ಕ್ಕೆ ನೈಸರ್ಗಿಕ ಹತ್ತಿ ಕೃಷಿ ಹಾಗೂ ನೇಯ್ಗೆ ಕುರಿತುಅನಂತೂ ಮತ್ತು ವಾಣಿ ಮೂರ್ತಿ ಮಾತನಾಡಲಿದ್ದಾರೆ. ಜತೆಗೆ ಬಟ್ಟೆಗಳಿಗೆ ನೈಸರ್ಗಿಕ ಬಣ್ಣ ನೀಡುವಿಕೆಯ ಬಗ್ಗೆ ಉಚಿತ ಕಾರ್ಯಾಗಾರ ಕೂಡ ಇದೇ ದಿನ ನಡೆಯಲಿದೆ.

ಕಾರ್ಯಕ್ರಮ ನಡೆಯುವ ಸ್ಥಳ:

ಅದ್ರಿಶ್ ಜಿರೋ ವೇಸ್ಟ್ ಆರ್ಗಾನಿಕ್ ಸ್ಟೋರ್, 42, 8ನೇ ಮುಖ್ಯ ರಸ್ತೆ, 3ನೇ ಹಂತ, ಜೆ.ಪಿ.ನಗರ. ಸಮಯ: ಬೆಳಿಗ್ಗೆ 11 ರಾತ್ರಿ 8. ಹೆಚ್ಚಿನ ಮಾಹಿತಿಗೆ: 6364029909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.