ಕೋಲ್ಕತ್ತ: ‘ಭಾರತದಲ್ಲಿ ಜಪಾನ್ ದೇಶದ 1,400ಕ್ಕೂ ಹೆಚ್ಚು ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದರಿಂದ ಉಭಯ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ಜಪಾನ್ನ ಕಾನ್ಸುಲೇಟ್ ಜನರಲ್ ನಕಗಾವಾ ಕೊಯಿಚಿ ತಿಳಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭದ್ರತೆ, ಹವಾಮಾನ ಬದಲಾವಣೆ ತಡೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಎರಡೂ ದೇಶಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

‘ಭಾರತದಲ್ಲಿ ಬಂಡವಾಳ ಹೂಡುವ ರಾಷ್ಟ್ರಗಳ ಪೈಕಿ ಜಪಾನ್ ಐದನೇ ಅತಿದೊಡ್ಡ ದೇಶವಾಗಿದೆ. 2000ರಿಂದ ಪ್ರಸಕ್ತ ವರ್ಷದ ಇಲ್ಲಿಯವರೆಗೆ ₹3.54 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ’ ಎಂದು ವಿವರಿಸಿದರು.

20ನೇ ಶತಮಾನದ ಆರಂಭದಲ್ಲಿ ಜಪಾನ್ ಮತ್ತು ಭಾರತದ ನಡುವೆ ಬೌದ್ಧಿಕ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಬಾಂಧವ್ಯ ಆರಂಭಗೊಂಡಿತು ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.