ನವದೆಹಲಿ: ಗೌತಮ್ ಅದಾನಿ ಸಮೂಹದ ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯ ಜೂನ್ 24ರಿಂದ ಸೆನ್ಸೆಕ್ಸ್ ಪ್ರವೇಶಿಸಲಿದೆ ಎಂದು ಅಧಿಕೃತ ಪ್ರಕಟಣೆಯೊಂದು ಶುಕ್ರವಾರ ತಿಳಿಸಿದೆ.

ಐಟಿ ದೈತ್ಯ ವಿಪ್ರೊವನ್ನು ಬದಿಗೊತ್ತಿ ಅದಾನಿ ಪೋರ್ಟ್ಸ್ ಸೆನ್ಸೆಕ್ಸ್ ಸೇರ್ಪಡೆಯಾಗಿದೆ.
.ಉತ್ಕೃಷ್ಟ ಎಂದು ಕಳಪೆ ಕಲ್ಲಿದ್ದಲು ಪೂರೈಕೆ: ಅದಾನಿ ಸಮೂಹದ ವಿರುದ್ಧ ಆರೋಪ.
ಇದರ ಘೋಷಣೆಯನ್ನು ಏಷ್ಯಾ ಇಂಡೆಕ್ಸ್ ಮಾಡಿದೆ. ಸೋಮವಾರದಿಂದ ಅಂದರೆ ಮೇ 24ರಿಂದ ಅಧಿಕೃತವಾಗಿ ಸೆನ್ಸೆಕ್ಸ್‌ಗೆ ಅದಾನಿ ಪೋರ್ಟ್ಸ್ ತೆರೆದುಕೊಳ್ಳಲಿದೆ ಎಂದು ಅದು ಹೇಳಿದೆ.

ಮಾರುಕಟ್ಟೆ ಮೌಲ್ಯದಲ್ಲಿ ಕೊನೆಯ ಸ್ಥಾನದಲ್ಲಿದ್ದ ವಿಪ್ರೊವನ್ನು ಬದಿಗೊತ್ತಿ ಅದಾನಿ ಪೋರ್ಟ್ಸ್ ಸ್ಥಾನ ಪಡೆದಿದೆ.

ಇದರ ಜೊತೆಗೆ ಡಿಲಿಸ್ ಲ್ಯಾಬೊರಾಟರೀಸ್ ಲಿಮಿಟೆಡ್ ಸಂಸ್ಥೆಯನ್ನು ಬದಿಗೊತ್ತಿ ಟಾಟಾ ಸಮೂಹದ ಟ್ರೆಂಟ್ ಲಿಮಿಟೆಡ್ ಸೆನ್ಸೆಕ್ಸ್ ಸೇರ್ಪಡೆಯಾಗಿದೆ.
.ಸೆನ್ಸೆಕ್ಸ್ ಗುಚ್ಛಕ್ಕೆ ಅದಾನಿ ಎಂಟರ್ಪ್ರೈಸಸ್? .
ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 30 ಕಂಪನಿಗಳು ಈ ಗುಚ್ಛದಲ್ಲಿರುತ್ತವೆ. ಇದರಲ್ಲಿ ವಿಪ್ರೊ ಕೊನೆಯ ಸ್ಥಾನದಲ್ಲಿತ್ತು. ಅದಾನಿ ಎಂಟರ್‌ಪ್ರೈಸಸ್‌ನ ಮಾರುಕಟ್ಟೆ ಮೌಲ್ಯ ಏರಿಕೆಯಾಗಿತ್ತು. ಹಾಗಾಗಿ ಅದಾನಿ ಕಂಪನಿಯು ವಿಪ್ರೊ ಕಂಪನಿಯನ್ನು ಬದಿಗೊತ್ತಿ ಅದರ ಸ್ಥಾನಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.