ನವದೆಹಲಿ: ದೇಶಿ ವಿಮಾನ ಪ್ರಯಾಣ ದರವು ದುಬಾರಿ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಕನಿಷ್ಠ ಹಾಗೂ ಗರಿಷ್ಠ ದರವನ್ನು ಕ್ರಮವಾಗಿ ಶೇಕಡ 9.83 ಮತ್ತು ಶೇಕಡ 12.82ರಷ್ಟು ಹೆಚ್ಚಿಸಿದೆ.

2020ರಲ್ಲಿ ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25ರಂದು ಕನಿಷ್ಠ ಮತ್ತು ಗರಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವು ನಿಗದಿ ಮಾಡಿತ್ತು. ವಿಮಾನದ ಹಾರಾಟ ಅವಧಿಯನ್ನು ಆಧರಿಸಿ ಇದನ್ನು ನಿಗದಿ ಮಾಡಲಾಗಿತ್ತು. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ ವಿಮಾನಯಾನ ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಬೆಲೆ ನಿಗದಿ ಮಾಡಲಾಗಿತ್ತು.

40 ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಮಾನ ಪ್ರಯಾಣಕ್ಕೆ ಕೇಂದ್ರವು ₹ 2,900 ಕನಿಷ್ಠ ಬೆಲೆ, ₹ 8,800 ಗರಿಷ್ಠ ಬೆಲೆ ನಿಗದಿ ಮಾಡಿ ಆಗಸ್ಟ್ 12ರಂದು ಆದೇಶ ಹೊರಡಿಸಿದೆ. ಬೇರೆ ಬೇರೆ ಅವಧಿಯ ವಿಮಾನಯಾನ ದರಗಳನ್ನು ಕೂಡ ಕೇಂದ್ರವು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.