ನವದೆಹಲಿ: ಗ್ರಾಹಕರು ಖರೀದಿಯ ಮನವಿ ಸಲ್ಲಿಸಿದ ದಿನವೇ ಉತ್ಪನ್ನಗಳನ್ನು ಪೂರೈಸಲು ಇ–ಕಾಮರ್ಸ್ ಕಂಪನಿಗಳು ಮುಂದಾಗಿವೆ. ಇದರಿಂದ ನಗರ ವ್ಯಾಪ್ತಿಗಳಲ್ಲಿ ಸಣ್ಣ ಉಗ್ರಾಣಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

ಲಾಕ್ಡೌನ್ನಿಂದಾಗಿ ಜನರು ಆಹಾರ ಮತ್ತು ದಿನಸಿ ಉತ್ಪನ್ನಗಳಿಗಾಗಿ ಇ–ಕಾಮರ್ಸ್ ಮೊರೆ ಹೋಗಿದ್ದಾರೆ. ಗ್ರಾಹಕರು ಬುಕ್ ಮಾಡಿದ ದಿನವೇ ಅವುಗಳನ್ನು ಪೂರೈಸಬೇಕಾಗುತ್ತದೆ. ಇಂತಹ ಉತ್ಪನ್ನಗಳನ್ನು ಇಡಲು ಸಣ್ಣ ಉಗ್ರಾಣಗಳು ಬೇಕಾಗುವುದರಿಂದ ಅವುಗಳ ಬೇಡಿಕೆ ಹೆಚ್ಚಾಗಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್ ಹೇಳಿದೆ.

ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಗ್ರಾಹಕರಿಗೆ ಬೇಗನೆ ವಿತರಿಸಲು ಅನುಕೂಲ ಆಗುವಂತೆ ಉತ್ಪನ್ನಗಳನ್ನು ಇಟ್ಟುಕೊಳ್ಳಲು ಸಣ್ಣ ಉಗ್ರಾಣಗಳು ಬೇಕಾಗಲಿವೆ ಎಂದು ಅಭಿಪ್ರಾಯಪಟ್ಟಿದೆ.

12 ತಿಂಗಳಿನಲ್ಲಿ ನಗರಗಳು ಉತ್ಪನ್ನಗಳನ್ನು ಪೂರೈಸುವ ಸಣ್ಣ ವಿತರಣಾ ಕೇಂದ್ರಗಳಾಗಲಿವೆ. ಬೆಂಗಳೂರು, ಮುಂಬೈ, ಚೆನ್ನೈ ಮತ್ತು ದೆಹಲಿ ರಾಜಧಾನ ಪ್ರದೇಶಗಳಲ್ಲಿ 5 ಸಾವಿರದಿಂದ 10 ಸಾವಿರ ಚದರ ಅಡಿಯ ಉಗ್ರಾಣಗಳಿಗೆ ಬೇಡಿಕೆ ಬರಲಿದೆ.

ಮುಖ್ಯಾಂಶಗಳು

5–10 ಸಾವಿರ ಚದರ ಅಡಿಯ ಉಗ್ರಾಣಗಳಿಗೆ ಬೇಡಿಕೆ

ಇ–ಕಾಮರ್ಸ್ಗೆ ದಿನಸಿ ಪೂರೈಕೆಗೆ ಅನುಕೂಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.