ನವದೆಹಲಿ: ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆ ಎಲ್‌ಪಿಜಿ ದರ ಏರಿಕೆಯಾಗಿರುವ ಬೆನ್ನಲ್ಲೇ ಸಿಎನ್‌ಜಿ ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ (ಪಿಎನ್‌ಜಿ) ದರದಲ್ಲೂ ಹೆಚ್ಚಳ ಮಾಡಲಾಗಿದೆ. ಗುರುವಾರ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ ಒಂದು ರೂಪಾಯಿ ಹೆಚ್ಚಿಸಲಾಗಿದೆ.

ಪ್ರತಿ ಕೆಜಿ ಸಿಎನ್‌ಜಿ ದರ 59.01 ರೂಪಾಯಿ ಮತ್ತು ಪ್ರತಿ ಕ್ಯೂಬಿಕ್ ಮೀಟರ್ ಪಿಎನ್‌ಜಿ ದರ 36.61 ರೂಪಾಯಿ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 1.60 ರೂಪಾಯಿಯಷ್ಟು ಏರಿಕೆಯಾಗಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಳವಾಗಿದೆ.

ಜಾಗತಿಕವಾಗಿ ನೈಸರ್ಗಿಕ ಅನಿಲ ದರದಲ್ಲಿ ಏರಿಕೆಯಾಗಿರುವುದರಿಂದ ಈ ತಿಂಗಳು ಮೂರನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳ ಕಂಡಿದೆ. ಕಳೆದ ಎರಡು ಬಾರಿಯ ದರ ಏರಿಕೆಯಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ ಒಟ್ಟು 50 ಪೈಸೆ ಹೆಚ್ಚಳವಾಗಿದೆ. ಈ ವರ್ಷ ಪ್ರತಿ ಕೆಜಿಗೆ ಒಟ್ಟು ₹5.50ರಷ್ಟು ಏರಿಕೆಯಾಗಿದೆ.

ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್‌ನಲ್ಲಿ ಪ್ರತಿ ಕೆಜಿ ಸಿಎನ್‌ಜಿ ದರ ₹61.58 ಹಾಗೂ ಗುರುಗ್ರಾಮದಲ್ಲಿ ₹67.37 ಇದೆ.

ಇದನ್ನೂ ಓದಿ–ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ದರ: ಮುಂಬೈನಲ್ಲಿ ₹111 ದಾಟಿದ ಲೀಟರ್ ಪೆಟ್ರೋಲ್

ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕೃತಗೊಂಡಿಲ್ಲ. ಕ್ರಿಸಿಲ್ ರಿಸರ್ಚ್ ಪ್ರಕಾರ, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಸರಾಸರಿ ದರವು 100 ಇದ್ದು, ಪೆಟ್ರೋಲ್ ಮತ್ತು ಡೀಸೆಲ್ ರಿಟೇಲ್ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 9ರಿಂದ 12 ರೂಪಾಯಿ ಹೆಚ್ಚಿಸುವುದು ಅವಶ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.