ನವದೆಹಲಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಒಂದು ಡಾಲರ್ಗೆ ₹ 76ರಿಂದ ₹ 76.50ರ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಕಚ್ಚಾತೈಲ ದರ ಏರಿಕೆ ಮತ್ತು ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ದೇಶಿ ಕರೆನ್ಸಿಯ ಮೌಲ್ಯ ಇಳಿಕೆಯಾಗುವ ಸಾಧ್ಯತೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾಲರ್–ರೂಪಾಯಿ ಮುನ್ನೋಟವು ಅಲ್ಪಾವಧಿಯಲ್ಲಿ ಇಳಿಮುಖವಾಗಿರಲಿದೆ. ಒಂದು ಡಾಲರ್ಗೆ ರೂಪಾಯಿ ಮೌಲ್ಯವು ₹ 73.50ರಷ್ಟು ಇರುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ. ದೀರ್ಘಾವಧಿಯಲ್ಲಿ ದೇಶಿ ಕರೆನ್ಸಿಯು ₹ 75.50ರಿಂದ ₹ 76ರ ಮಟ್ಟ ತಲುಪುವ ಸಾಧ್ಯತೆ ಇದೆ. ವರ್ಷಾಂತ್ಯದ ವೇಳೆಗೆ ₹ 77ರ ಮಟ್ಟವನ್ನೂ ತಲುಪಬಹುದಾಗಿದೆ ಎಂದಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್ನ ಬಡ್ಡಿದರದ ಮುನ್ನೋಟ, ಅಮೆರಿಕದ ಆರ್ಥಿಕತೆಯ ಚೇತರಿಕೆ ಹಾಗೂ ಚೀನಾದೆಡೆಗೆ ಅಮೆರಿಕದ ಆಡಳಿತಾತ್ಮಕ ನಿಲುವು. ಈ ಮೂರು ಅಂಶಗಳು ರೂಪಾಯಿ ದಿಕ್ಕನ್ನು ನಿರ್ಧರಿಸಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ದೇಶಿ ಮಟ್ಟದಲ್ಲಿ ಆರ್ಬಿಐನ ಹಣಕಾಸು ನೀತಿಗಳು, ವಿದೇಶಿ ಬಂಡವಾಳ ಒಳಹರಿವು ಸಹ ರೂಪಾಯಿ ಮೌಲ್ಯವನ್ನು ನಿರ್ಧರಿಸಲಿವೆ ಎಂದೂ ಹೇಳಿದ್ದಾರೆ.

ರೂಪಾಯಿ ಮೌಲ್ಯವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇನ್ನಷ್ಟು ದುರ್ಬಲವಾಗುವ ನಿರೀಕ್ಷೆ ಇದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.