ನವದೆಹಲಿ: ಪ್ಯಾಕೇಜಿಂಗ್‌ನಲ್ಲಿನ ದೋಷದಿಂದಾಗಿ ಅಮೆರಿಕದ ಮಾರುಕಟ್ಟೆಯಿಂದ ಜೆನರಿಕ್ ಔಷಧಿಯ 8 ಸಾವಿರ ಬಾಟಲಿಗಳನ್ನು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಹಿಂಪಡೆಯುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಯುಎಸ್‌ಎಫ್‌ಡಿಎ) ತಿಳಿಸಿದೆ.

ಹೈದರಾಬಾದ್‌ನ ಡಾ.ರೆಡ್ಡೀಸ್ 8,280 ಬಾಟಲಿಗಳ ಟ್ಯಾಕ್ರೋಲಿಮಸ್ ಮಾತ್ರೆಗಳನ್ನು ಹಿಂಪಡೆಯುತ್ತಿದೆ. ಒಂದು 0.5 ಮಿಲಿ ಗ್ರಾಂ ಟ್ಯಾಕ್ರೋಲಿಮಸ್ ಕ್ಯಾಪ್ಸುಲ್ 1 ಮಿಲಿ ಗ್ರಾಂ (ಎಂ.ಜಿ) ಟ್ಯಾಕ್ರೋಲಿಮಸ್ ಕ್ಯಾಪ್ಸುಲ್‌ಗಳ ಬಾಟಲಿಯಲ್ಲಿ ಕಂಡು ಬಂದಿದೆ ಎಂದು ಯುಎಸ್‌ಎಫ್‌ಡಿಎ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಕಸಿ ಮಾಡಲಾದ ಅಂಗಾಂಗವನ್ನು ದೇಹವು ತಿರಸ್ಕರಿಸದಂತೆ ನೋಡಿಕೊಳ್ಳುವ ಔಷಧ ಇದಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿಯೂ ಇದೇ ಔಷಧದ 4 ಸಾವಿರ ಬಾಟಲಿಗಳನ್ನು ಡಾ.ರೆಡ್ಡೀಸ್ ಹಿಂಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.