ನವದೆಹಲಿ: ಜಿಎಸ್‌ಟಿಆರ್–3ಬಿ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಐದು ದಿನಗಳವರೆಗೆ ವಿಸ್ತರಿಸಿದೆ.

ಮಾರಾಟದ ಅಂತಿಮ ಲೆಕ್ಕಪತ್ರ ಸಲ್ಲಿಸಲು ಸೆಪ್ಟೆಂಬರ್ ತಿಂಗಳ ಜಿಎಸ್‌ಟಿಆರ್–ಬಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 20ರಿಂದ 25ಕ್ಕೆ ವಿಸ್ತರಿಸಲಾಗಿದೆ.

ಜುಲೈ–ಮಾರ್ಚ್ ಅವಧಿಗೆ ‘ಹುಟ್ಟುವಳಿ ತೆರಿಗೆ ಜಮೆ’ ಪಡೆಯಲು ಅಕ್ಟೋಬರ್ 20ರ ಗಡುವನ್ನು 25ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಜಿಎಸ್‌ಟಿಯಲ್ಲಿ ಜುಲೈ–ಮಾರ್ಚ್ ಅವಧಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅಕ್ಟೋಬರ್ 20ರ ಗಡುವು ನೀಡಲಾಗಿತ್ತು. ಅದನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಎಫ್‌ಕೆಸಿಸಿಐ ಸ್ವಾಗತ (ಬೆಂಗಳೂರು ವರದಿ):ಗಡುವು ವಿಸ್ತರಣೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಸ್ವಾಗತಿಸಿದೆ.

ಗಡುವು ವಿಸ್ತರಿಸುವಂತೆ ಕೋರಿ ಜಿಎಸ್‌ಟಿಎನ್ ಸಿಇಒ, ಜಿಎಸ್‌ಟಿ ಆಯುಕ್ತರು, ಜಿಎಸ್‌ಟಿ ಸದಸ್ಯರು, ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತ ಶೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಾಗಿತ್ತು ಎಂದು ‘ಎಫ್‌ಕೆಸಿಸಿಐ‘ನ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ತಿಳಿಸಿದ್ದಾರೆ.

‘ಜಿಎಸ್‌ಟಿ ಜಾಲತಾಣವನ್ನು ತಾಂತ್ರಿಕ ದೋಷಗಳಿಂದ ಮುಕ್ತಗೊಳಿಸಿದಲ್ಲಿ ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಕೆ ಸಾಧ್ಯವಾಗಲಿದ್ದು, ಗಡುವು ವಿಸ್ತರಿಸುವಂತೆ ಪದೇ ಪದೇ ಸರ್ಕಾರಕ್ಕೆ ಮನವಿ ಸಲ್ಲಿಸುವ ಅಗತ್ಯ ಬೀಳುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.