ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ತನ್ನ ಬಿಡ್ ಮೊತ್ತವನ್ನು ₹9,500 ಕೋಟಿಗೆ ಹೆಚ್ಚಿಸಲಿದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಕುರಿತು ಸಮೂಹವು ಪ್ರತಿಕ್ರಿಯೆ ನೀಡಿಲ್ಲ.

ಇದೇ 21ರಂದು ನಡೆದಿದ್ದ ಮೊದಲ ಹಂತದ ಹರಾಜಿನಲ್ಲಿ ಅಹಮದಾಬಾದ್‌ನ ಟೊರೆಂಟ್ ಸಮೂಹವು ₹8,640 ಕೋಟಿ ಮೊತ್ತದ ಬಿಡ್ ಸಲ್ಲಿಸಿತ್ತು. ಹಿಂದುಜಾ ಸಮೂಹವು ₹8,110 ಕೋಟಿ ಮೊತ್ತಕ್ಕೆ ಖರೀದಿ ಮಾಡುವುದಾಗಿ ಹೇಳಿತ್ತು. ಆದರೆ, ಇದೀಗ ತನ್ನ ಬಿಡ್ ಮೊತ್ತವನ್ನು ಬದಲಾಯಿಸಲು ಮುಂದಾಗಿದೆ. ಸಲ್ಲಿಕೆ ಆಗಿರುವ ಬಿಡ್‌ಗಳ ಪರಿಶೀಲನೆ ನಡೆಸಲು ಸಾಲ ನೀಡಿರುವ ಕಂಪನಿಗಳು ಸೋಮವಾರ ಸಭೆ ಸೇರಲಿವೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಳಿಯ (ಎನ್‌ಸಿಎಲ್‌ಟಿ) ಆದೇಶದ ಪ್ರಕಾರ, 2023ರ ಜನವರಿ 31ರ ಒಳಗಾಗಿ ದಿವಾಳಿ ಪ್ರಕ್ರಿಯೆ ಪೂರ್ನಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.