ನ್ಯೂಯಾರ್ಕ್/ನವದೆಹಲಿ: ಆನ್ಲೈನ್ ಮೂಲಕ ನಡೆಯುವ ಮಾರಾಟ ಉತ್ತಮವಾಗಿರುವುದರಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಆ್ಯಪಲ್ ಕಂಪನಿಯ ಭಾರತದ ವಹಿವಾಟು ದುಪ್ಪಟ್ಟಾಗಿದೆ ಎಂದು ಕಂಪನಿಯ ಸಿಇಒ ಟಿಮ್ ಕುಕ್ ಹೇಳಿದ್ದಾರೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಜಾಗತಿಕವಾಗಿ ₹ 8.10 ಲಕ್ಷ ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 21ರಷ್ಟು ಏರಿಕೆ ದಾಖಲಿಸಿದೆ. ಅಂತರರಾಷ್ಟ್ರೀಯ ಮಾರಾಟವು ಒಟ್ಟಾರೆ ವರಮಾನದ ಶೇ 64ರಷ್ಟಾಗಿದೆ.

‘ಭಾರತದಲ್ಲಿ, 2019ರ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ 2020ರ ಡಿಸೆಂಬರ್ ತ್ರೈಮಾಸಿಕದಲ್ಲಿ ವಹಿವಾಟು ದುಪ್ಪಟ್ಟಾಗಿದೆ. ಹೀಗಿದ್ದರೂ ದೇಶದಲ್ಲಿ ಇರುವ ಅವಕಾಶಗಳನ್ನು ಗಮನಿಸಿದರೆ ನಮ್ಮ ವಹಿವಾಟು ಇನ್ನೂ ಕಡಿಮೆ ಮಟ್ಟದಲ್ಲಿಯೇ ಇದೆ’ ಎಂದು ಅವರು ಹೇಳಿದ್ದಾರೆ.

ಆ್ಯಪಲ್ ಕಂಪನಿಯು ಸೆಪ್ಟಂಬರ್ 23ರಂದು ಭಾರತದಲ್ಲಿ ಆನ್ಲೈನ್ ಸ್ಟೋರ್ ಬಿಡುಗಡೆ ಮಾಡಿತು. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ತನ್ನೆಲ್ಲಾ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.