ನವದೆಹಲಿ: ಸೆಮಿಕಂಡಕ್ಟರ್ ಕೊರತೆಯಿಂದಾಗಿ ನವೆಂಬರ್ನಲ್ಲಿಯೂ ವಾಹನ ತಯಾರಿಕೆ ಮೇಲೆ ಪರಿಣಾಮ ಉಂಟಾಗಲಿದೆ ಎಂದುಮಾರುತಿ ಸುಜುಕಿ ಇಂಡಿಯಾ ಕಂಪನಿಯು ಶನಿವಾರ ಹೇಳಿದೆ.

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ ಮೇಲೆ ಪರಿಣಾಮ ಉಂಟಾಗಿದೆ.ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ,ಹರಿಯಾಣ ಮತ್ತು ಗುಜರಾತ್ನಲ್ಲಿ ಇರುವ ಘಟಕಗಳಲ್ಲಿನಒಟ್ಟಾರೆ ಸಾಮರ್ಥ್ಯದ ಶೇ 85ರಷ್ಟು ಇರುವ ಅಂದಾಜು ಮಾಡಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಹರಿಯಾಣದ ಗುರುಗ್ರಾಮ ಮತ್ತು ಮಾನೇಸರ ಘಟಕಗಳ ವಾರ್ಷಿಕ ತಯಾರಿಕಾ ಸಾಮರ್ಥ್ಯವು 15 ಲಕ್ಷ. ಅಲ್ಲದೆ, ಜಪಾನ್ ಸುಜುಕಿ ಮೋಟರ್ ಕಾರ್ಪೊರೇಷನ್ನ ಅಂಗಸಂಸ್ಥೆ ಆಗಿರುವ ಎಸ್ಎಂಜಿ ವಾರ್ಷಿಕವಾಗಿ 7.5 ಲಕ್ಷ ಹೆಚ್ಚುವರಿ ತಯಾರಿಕಾ ಸಾಮರ್ಥ್ಯವನ್ನೂ ಹೊಂದಿದೆ.

ಎಲೆಕ್ಟ್ರಾನಿಕ್ ಬಿಡಿಭಾಗಗಳಕೊರತೆಯಿಂದಾಗಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1.16 ಲಕ್ಷ ವಾಹನಗಳನ್ನು ತಯಾರಿಸಲು ಆಗಿಲ್ಲ ಎಂದು ಕಂಪನಿಯು ತಿಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ 2 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಕಾರ್ ವಿತರಣೆ ಮಾಡುವುದು ಬಾಕಿ ಇದ್ದು, ಗ್ರಾಹಕರಿಗೆ ತ್ವರಿತವಾಗಿ ಕಾರ್ ನೀಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.