ನವದೆಹಲಿ: ತೈವಾನ್ ಮೂಲದ ಹಡಗು ಸಂಸ್ಥೆ ‘ಎವರ್‌ಗ್ರೀನ್’ ತನ್ನ ಕೆಲವು ಉದ್ಯೋಗಿಗಳಿಗೆ ವರ್ಷಾಂತ್ಯದ ಬೋನಸ್‌ಗಳನ್ನು ನೀಡುತ್ತಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಹೆಚ್ಚಿನ ಉದ್ಯೋಗಿಗಳು 10 ರಿಂದ 45 ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆದಿದ್ದಾರೆ. ಉತ್ತಮ ಕಾರ್ಯ ನಿರ್ವಹಿಸಿರುವವರಿಗೆ 52 ತಿಂಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸುದ್ದಿ ಮಾಧ್ಯಮ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಎವರ್‌ಗ್ರೀನ್ ತನ್ನ ಉದ್ಯೋಗಿಗಳಿಗೆ 2021 ರಲ್ಲಿ 40 ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡಿ ಸುದ್ದಿಯಾಗಿತ್ತು.

ಜಗತ್ತನ್ನು ತಲ್ಲಣಗೊಳಿಸಿದ್ದ ಎವರ್‌ಗ್ರೀನ್

ಎವರ್‌ಗ್ರೀನ್ ಸಂಸ್ಥೆ 2021ರ ಆರಂಭದಲ್ಲಿ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಸಂಸ್ಥೆಯ ಮಾಲಿಕತ್ವದ ಹಡಗೊಂದು ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡು, ಹಲವು ದಿನ ಅಲ್ಲಿಯೇ ಇತ್ತು. ಹೀಗಾಗಿ ಇಡೀ ಜಗತ್ತಿನ ಸರಬರಾಜು ವ್ಯವಸ್ಥೆಯೇ ಏರುಪೇರಾಗಿತ್ತು.

91.6 ಕೋಟಿ ಡಾಲರ್ (₹6,813.07 ಕೋಟಿ) ಪರಿಹಾರ ಮೊತ್ತ ನೀಡುವಂತೆ ಸೂಯೆಜ್ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು. ಬಳಿಕ ಈ ಮೊತ್ತವನ್ನು 55.5 ಕೋಟಿ ಡಾಲರ್‌ಗೆ(₹4,127.89) ಇಳಿಕೆ ಮಾಡಲಾಗಿತ್ತು.

ಇವುಗಳನ್ನೂ ಓದಿ

ವಶಪಡಿಸಿಕೊಂಡಿದ್ದ ಹಡಗು ಬಿಡುಗಡೆಗೆ ಒಪ್ಪಂದ

ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಹಡಗು: 6 ದಿನಗಳ ಬಳಿಕ ಚಲಿಸಿದ 'ಎವರ್ ಗಿವೆನ್'

ಸುಯೆಜ್ ಕಾಲುವೆಗೆ ಎದುರಾಗಿತ್ತು ಮತ್ತೊಂದು ಕಂಟಕ...!

ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಹಡಗು; ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.