ನವದೆಹಲಿ: ಭಾರತ ಮತ್ತು ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಪರಾಮರ್ಶೆ ಸಭೆಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಪ್ರಸಕ್ತ ತಿಂಗಳಿನಲ್ಲಿ ನಾಲ್ಕನೇ ಸುತ್ತಿನ ಸಮಾಲೋಚನೆಯು ಮುಕ್ತಾಯಗೊಂಡಿದೆ.

ಸುಸ್ಥಿರ ಮಾದರಿಯಲ್ಲಿ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಹಿವಾಟು ನಡೆಸಲು ಈ ಒಪ್ಪಂದವು ನೆರವಾಗಲಿದೆ ಎಂದು ಹೇಳಿದೆ.

ಸರಕುಗಳಿಗೆ ಸಂಬಂಧಿಸಿದ ಆಸಿಯಾನ್ ಇಂಡಿಯಾ ವ್ಯಾಪಾರದ ಜಂಟಿ ಸಮಿತಿಯಡಿ ಎಂಟು ಉಪ ಸಮಿತಿಗಳನ್ನು ರಚಿಸಲಾಗಿದೆ. ಮಾರುಕಟ್ಟೆಯ ಲಭ್ಯತೆ, ನಿಯಮಾವಳಿ, ತಾಂತ್ರಿಕ ನಿಯಮ, ಕಸ್ಟಮ್ಸ್, ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ಕಾನೂನು ಹಾಗೂ ಸಾಂಸ್ಥಿಕ ನಿಬಂಧನೆಗಳ ಬಗ್ಗೆ ಈ ಸಮಿತಿಗಳು ಚರ್ಚಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.