ನವದೆಹಲಿ:ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವುದರತ್ತ ಸರ್ಕಾರ ಗಮನ ನೀಡಿದೆ. ಹೀಗಾಗಿಸದ್ಯಕ್ಕೆ, ಬೇರೆ ಯಾವುದೇ ಬ್ಯಾಂಕ್‌ಗಳ ವಿಲೀನ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಜತೆ 5 ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ ಬಳಿಕ ಸರ್ಕಾರ ಮತ್ತೊಂದು ವಿಲೀನ ಪ್ರಕ್ರಿಯೆ ಕೈಗೊಂಡಿದೆ. ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಸಹ ಷೇರು ವಿನಿಮಯ ಅನುಪಾತಕ್ಕೆ ಒಪ್ಪಿಗೆ ನೀಡಿವೆ.

ವಿಲೀನದ ಬಳಿಕ ಸೃಷ್ಟಿಯಾಗಲಿರುವ ಮೂರನೇ ಅತಿ ದೊಡ್ಡ ಬ್ಯಾಂಕ್ ಏಪ್ರಿಲ್ 1 ರಿಂದ ಕಾರ್ಯಾರಂಭ ಮಾಡಲಿದೆ. ಸದ್ಯ, ಎಸ್‌ಬಿಐ ಮೊದಲ ಸ್ಥಾನದಲ್ಲಿದ್ದು, ಐಸಿಐಸಿಐ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ.

ಮೂರೂ ಬ್ಯಾಂಕ್‌ಗಳ ಒಟ್ಟಾರೆವಹಿವಾಟು ಮೊತ್ತ ₹ 14.82 ಲಕ್ಷ ಕೋಟಿಗೆ ತಲುಪಲಿದೆ. ವಿಲೀನದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 21 ರಿಂದ 19ಕ್ಕೆ ಇಳಿಯಲಿದೆ.

ಒಪ್ಪಂದದ ಅನ್ವಯ ವಿಜಯ ಬ್ಯಾಂಕ್‌ನಲ್ಲಿ ಷೇರುದಾರರು ಹೊಂದಿರುವ ಪ್ರತಿ 1 ಸಾವಿರ ಷೇರಿಗೆ ಬ್ಯಾಂಕ್ ಆಫ್ ಬರೋಡಾದ (ಬಿಒಬಿ) 402 ಷೇರುಗಳನ್ನು ಪಡೆಯಲಿದ್ದಾರೆ.

ದೇನಾ ಬ್ಯಾಂಕ್‌ನಲ್ಲಿ ಷೇರುದಾರರು ಹೊಂದಿರುವ ಪ್ರತಿ 1 ಸಾವಿರ ಷೇರಿಗೆ ಬಿಒಬಿನ 110 ಷೇರುಗಳನ್ನು ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.