ಮುಂಬೈ: 2020–21ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಸೂಲಾಗದ ಸಾಲದ ಪ್ರಮಾಣವು (ಎನ್ಪಿಎ) ಶೇ 2ರಿಂದ ಶೇ 4ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಅಂದಾಜಿಸಿದೆ.

ಆರ್ಥಿಕ ಉತ್ತೇಜನಾ ಕೊಡುಗೆ, ತೆರಿಗೆ ಸಂಗ್ರಹ ಹಾಗೂ ಷೇರು ವಿಕ್ರಯ ಮೊತ್ತದಲ್ಲಿನ ಕುಸಿತ ಹಾಗೂ ಬ್ಯಾಂಕ್ಗಳ ಪುನರ್ಧನ ಉದ್ದೇಶಕ್ಕೆ ಇತರ ಸಂಪನ್ಮೂಲಗಳನ್ನು ಹೆಚ್ಚಿಸುವ ಕಾರಣಗಳಿಗೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಕೂಡ ಶೇ 2ರಷ್ಟು ಏರಿಕೆಯಾಗಲಿದೆ.

ಬ್ಯಾಂಕ್ಗಳ ಪುನರ್ಧನ ಉದ್ದೇಶಕ್ಕೆ ₹ 52 ಸಾವಿರ ಕೋಟಿಗಳಿಂದ ₹ 1.12 ಲಕ್ಷ ಕೋಟಿ ಬೇಕಾಗಬಹುದು. ಈ ಭಾರಿ ಮೊತ್ತ ಭರಿಸಲು ಸರ್ಕಾರ ಪುನರ್ಧನ ಬಾಂಡ್ ಬಿಡುಗಡೆ ಮಾಡಬೇಕಾದೀತು. ಭಾರತೀಯ ರಿಸರ್ವ್ ಬ್ಯಾಂಕ್ನ ಬಳಿ ಇರುವ ಹೆಚ್ಚುವರಿ ಹಣವನ್ನು ಬಳಸಬೇಕಾಗಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.