ಬೆಂಗಳೂರು: ಕೈಗೆಟಕುವ ಮನೆಗೆ ಹಿಂದಿನಂತೆ ಈಗ ನಿಖರವಾದ ವ್ಯಾಖ್ಯಾನ ನೀಡುವುದು ಕಷ್ಟ. ಏಕೆಂದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕಳೆದ ದಶಕದಲ್ಲಿ ನಗರಗಳಲ್ಲಿ ಕೈಗೆಟಕುವ ಮನೆಗಳ ದರವು ₹45 ಲಕ್ಷದಿಂದ ₹1.2 ಕೋಟಿಯವರೆಗೆ ಇದೆ ಎಂದು ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ನ ಸಿಇಒ ಮಲ್ಲಣ್ಣ ಸಾಸಲು ಹೇಳಿದರು.

ರಿಯಲ್ ಎಸ್ಟೇಟ್‌ನ ವಸತಿ ವಹಿವಾಟಿನಲ್ಲಿ ಕೈಗೆಟಕುವ ಮನೆಗಳ ವಿಭಾಗದ (₹45 ಲಕ್ಷದಿಂದ ₹1.2 ಕೋಟಿ) ಪಾಲೇ ದೊಡ್ಡದು. ಹೀಗಾಗಿ ನಾವು ಈ ವಿಭಾಗದಲ್ಲಿಯೇ ನಮ್ಮ ಗಮನವನ್ನು ಇನ್ನಷ್ಟು ಕೇಂದ್ರೀಕರಿಸಲು ಬಯಸುತ್ತೇವೆ. ಗ್ರಾಹಕರು ನೀಡುವ ಹಣಕ್ಕೆ ಅಳತೆಮಾಡಬಹುದಾದ ರೀತಿಯಲ್ಲಿ ಮೌಲ್ಯ ತಂದುಕೊಡುವ ಭರವಸೆ ನೀಡುತ್ತೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂಪನಿಯು ಪರಿಸರ, ಸಮಾಜ ಮತ್ತು ಆಡಳಿತಕ್ಕೆ (ಇಎಸ್‌ಜಿ) ಸಂಬಂಧಿಸಿದ ಎರಡನೇ ವರದಿಯನ್ನು ಬುಧವಾರ ಬಿಡುಗಡೆ ಮಾಡಿತು.

2021–23ರ ಅವಧಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವಂತೆ ಮಾಡಲು ಅಗತ್ಯವಾದ ಸುಸ್ಥಿರವಾದ ಕಾರ್ಯಾಚರಣೆ ಮತ್ತು ವಹಿವಾಟಿನ ಪದ್ಧತಿಯನ್ನು ಕಂಪನಿಯು ಅಳವಡಿಸಿಕೊಂಡಿರುವ ಬಗ್ಗೆ ವರದಿಯು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.