ನವದೆಹಲಿ: ಎಸ್ಬಿಐ ಸಾಲದ ಬಡ್ಡಿ ದರವನ್ನು (ಎಂಸಿಎಲ್ಆರ್) ಏಪ್ರಿಲ್ 15ರಿಂದ ಅನ್ವಯವಾಗುವಂತೆ ಶೇಕಡ 0.10ರಷ್ಟು ಹೆಚ್ಚಿಸಿದೆ. ಈ ಕ್ರಮದಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಜಾಸ್ತಿ ಆಗಲಿದೆ. ಇದು ಈಗಾಗಲೇ ಸಾಲ ಪಡೆದಿರುವವರಿಗೂ ಅನ್ವಯವಾಗಲಿದೆ.

ಎಲ್ಲ ಅವಧಿಯ ಸಾಲಗಳಿಗೂ ಇದು ಅನ್ವಯವಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಆರ್ಬಿಐ ಈ ತಿಂಗಳ ಆರಂಭದಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡದೆ ಇದ್ದರೂ ಎಸ್ಬಿಐ ಈ ಕ್ರಮ ಕೈಗೊಂಡಿದೆ.

ಈ ನಡುವೆ, ಬ್ಯಾಂಕ್ ಆಫ್ ಬರೋಡ ಕೂಡ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದು ಏಪ್ರಿಲ್ 12ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ಗಳು ಕೂಡ ಬಡ್ಡಿ ದರ ಹೆಚ್ಚಿಸುವ ನಿರೀಕ್ಷೆ ಇದೆ.

ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್ಬಿಐ ಎರಡು ತಿಂಗಳ ಹಿಂದೆ ಶೇ 0.15ರವರೆಗೆ ಹೆಚ್ಚಿಸಿತ್ತು. ಈಗ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.