ನವದೆಹಲಿ: ವಾಣಿಜ್ಯ ವಾಹನ ತಯಾರಿಸುವಹಿಂದುಜಾ ಸಮೂಹ ಸಂಸ್ಥೆಯ ಅಶೋಕ್ ಲೇಲ್ಯಾಂಡ್ ನಿರ್ದೇಶಕ ಹಾಗೂಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ವಿನೋದ್ ದಾಸರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈಹಠಾತ್ ಬೆಳವಣಿಗೆಯಿಂದಾಗಿ ಅವರು ಹಿಂದುಜಾ ಗ್ರೂಪ್ ಜೊತೆಗಿನ ಸುದೀರ್ಘ 14 ವರ್ಷಗಳ ಸಂಬಂಧ ಕಡಿದುಕೊಳ್ಳಲಿದ್ದಾರೆ.ಆದಾಗ್ಯೂ ಅವರು ಮಾರ್ಚ್ 31ರ ವರೆಗೆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವು ಯಾವುವು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಮಂಗಳವಾರ ನಡೆದ ಮಂಡಳಿ ಸಭೆಯ ವೇಳೆದಾಸರಿ ತಮ್ಮ ನಿರ್ಧಾರ ಪ್ರಕಟಿಸಿದರು ಎಂದಿರುವಅಶೋಕ್ ಲೇಲ್ಯಾಂಡ್ ಮುಖ್ಯಸ್ಥ ಧೀರಜ್ ಹಿಂದುಜಾ, ‘ಅವರ ನಿರ್ಧಾರವನ್ನು ಗೌರವಿಸಲಾಗುವುದು. ಮಂಡಳಿಯು ದಾಸರಿ ರಾಜೀನಾಮೆಯನ್ನು ಅಂಗೀಕರಿಸಿದೆ’ ಎಂದು ತಿಳಿಸಿದರು.

‘ದಾಸರಿ ಅವರ ನೇತೃತ್ವದಲ್ಲಿ ಕಂಪೆನಿಯು ಎಲ್ಲಾ ರೀತಿಯಿಂದಯೂ ಅಭೂತಪೂರ್ವ ಯಶಸ್ಸನ್ನು ಸಾಧಿಸಿತ್ತು. ತುಂಬಾ ಮುಖ್ಯವಾದ ವಿಚಾರವೆಂದರೆ ಅವರು ಅತ್ಯಂತ ಪ್ರಬಲವಾದ ತಂಡ, ಸಂಸ್ಥೆಯನ್ನು ಕಟ್ಟಿದ್ದರು. ಇನ್ನು ಮುಂದೆಯೂ ಅಶೋಕ್ ಲೇಲ್ಯಾಂಡ್ ಅಭಿವೃದ್ಧಿಯ ಆವೇಗ ಮುಂದುವರಿಯುವ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.