ಮಹಾಲಿಂಗಪುರ: ‘ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಚಿತ್ರನಟಿ ತಾರಾ ಅನೂರಾಧಾ ಮಹಾಲಿಂಗಪುರ ಹಾಗೂ ಚಿಮ್ಮಡ ಗ್ರಾಮದಲ್ಲಿ ಭರ್ಜರಿ ರೋಡ್ ನಡೆಸಿ ಮತಯಾಚನೆ ಮಾಡಿದರು.

ರಸ್ತೆಯುದ್ದಕ್ಕೂ ಮತದಾರರಿಗೆ ಕೈ ಬೀಸಿ, ನಮಸ್ಕರಿಸಿ ಗಮನಸೆಳೆದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮೀನಾಕ್ಷಿ ಸವದಿ ಜತೆಗಿದ್ದರು.

ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ತಾರಾ, ‘ಅಭಿವೃದ್ಧಿ ಕಾರ್ಯ ಮಾಡುವುದರಲ್ಲಿ ಸಿದ್ದು ಸವದಿ ನಿಷ್ಠಾವಂತರಾಗಿದ್ದು, ಅವರನ್ನು ಮತ್ತೊಂದು ಸಲ ಗೆಲ್ಲಿಸಬೇಕು. ರಾಜ್ಯ ಮತ್ತು ದೇಶದಲ್ಲಿ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರವಾದರೆ ಗ್ರಾಮ, ಪಟ್ಟಣಗಳಲ್ಲಿ ಅಭಿವೃದ್ಧಿ ಪರ್ವ ಇನ್ನಷ್ಟು ಹೆಚ್ಚಲಿದೆ’ ಎಂದು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಸನಗೌಡ ಪಾಟೀಲ, ಶೇಖರ ಅಂಗಡಿ, ಪ್ರಕಾಶ ಜೀರಗಾಳ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಚನಬಸು ಯರಗಟ್ಟಿ, ಸಜನಸಾಬ ಪೆಂಡಾರಿ, ಮಹಾಲಿಂಗಪ್ಪ ಸನದಿ, ಬಸವರಾಜ ಚಮಕೇರಿ, ಡಾ.ಅಶೋಕ ದಿನ್ನಿಮನಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.