ಬಾದಾಮಿಯಲ್ಲಿ ಶೇಂಗಾ ಬೆಳೆ ಬಾಡಿದ್ದನ್ನು ರೈತ ಅಡಿವೆಪ್ಪ ಕಮಾಟರ ತೋರಿಸಿದರು
ಹಿಂಗಾರಿನಲ್ಲಿ 43,400 ಹೆಕ್ಟೇರ್‌ನಲ್ಲಿ ಬಿತ್ತನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲ ಪ್ರಯೋಜನ ಬೆಳೆನಷ್ಟ ಆತಂಕದಲ್ಲಿ ರೈತ
ಸೋಮವಾರದಿಂದ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಲಾಗುವುದು
ರಾಜು ಬಿಸನಾಳ ಸಹಾಯಕ ಎಂಜಿನಿಯರ್ ನೀರಾವರಿ ಇಲಾಖೆ
ರೈತರ ಕಣ್ಣೀರು
‘ಈ ಸಲ ಮಳಿ ಆಗಿ ನವಿಲುತೀರ್ಥ ಡ್ಯಾಂ ತುಂಬೈತಂತ ನಂಬಿ ಶೇಂಗಾ ಬಿತ್ತಿ ದೀಡತಿಂಗಳಾತರಿ. ಎಕರೆ ಹೊಲಕ ಒಂದು ಕ್ವಿಂಟಲ್ ಬೀಜ ಗೊಬ್ಬರ ಹಾಕೀನಿ. ಗಳೇವು ಆಳು-ಕಾಳು ಸೇರಿ ₹25 ಸಾವಿರ ಖರ್ಚು ಮಾಡೀನಿ. ಬೆಳಿ ಕೊಂಡಿ ಬಿಡಾಕ ಹತ್ತೈತಿ ಹಸಿ ಕಡಿಮೆ ಇದ್ದದ್ದಕ ಕೊಂಡಿ ಒಣಗಾಕ ಹತ್ಯಾವು ’ ಎಂದು ರೈತ ಅಡಿವೆಪ್ಪ ಕಮಾಟರ ಹೇಳಿದರು. ‘ನವೆಂಬರ್ ಮೊದಲ ವಾರದಲ್ಲೇ ಜಲಾಶಯದಿಂದ ನೀರು ಬಿಡಬೇಕಿತ್ತು. ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ರೈತರು ಕಬ್ಬು ಕಟಾವು ನಡೆಸಿದ್ದಾರೆ. ಕಾಲುವೆಗೆ ನೀರು ಬಿಟ್ಟರೆ ಹೊಲದಲ್ಲಿ ಟ್ರ್ಯಾಕ್ಟರ್ ಹೋಗದ ಕಾರಣಕ್ಕೆ ನೀರು ಹರಿಸಿಲ್ಲ. ಇದರಿಂದ ಬಾದಾಮಿ ತಾಲ್ಲೂಕಿನ ರೈತರಿಗೆ ನಷ್ಟವಾಗುತ್ತಿದೆ’ ಎಂದು ಮುತ್ತಲಗೇರಿ ರೈತ ಗೌಡಪ್ಪಗೌಡ ಕಳವಳ ವ್ಯಕ್ತಪಡಿಸಿದರು.