ಬಾಗಲಕೋಟೆ: ಠಾಣೆಗೆ ತೆರಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ ಅವರಿಗೆ ನಿಂದಿಸಿದ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಇಳಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆದ ತಮ್ಮ 9 ಮಂದಿ ಬೆಂಬಲಿಗರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಲು ಮುಂದಾದ ಪೊಲೀಸರ ಕೆಲಸಕ್ಕೆ ಕಾಶಪ್ಪನವರ ಅಡ್ಡಿಪಡಿಸಿದ್ದಾರೆ. ನೊಟೀಸ್ ಪಡೆಯದಂತೆ ಹಾಗೂ ವಿಚಾರಣೆಗೆ ಹಾಜರಾಗದಂತೆ ಪ್ರಚೋದನೆ ನೀಡಿದ್ದಾರೆ. ಈ ವೇಳೆ ಸಿಪಿಐ ಅಯ್ಯನಗೌಡರ ಮೇಲೆ ಹರಿಹಾಯ್ದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಅಯ್ಯನಗೌಡ ಪಾಟೀಲ ನೀಡಿದ ದೂರು ಆಧರಿಸಿ ಇಳಕಲ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143, 147, 353, 504, 506 ಕಲಂ ಅಡಿಯಲ್ಲಿ ವಿಜಯಾನಂದ ಕಾಶಪ್ಪನವರ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಅರ್ ದಾಖಲಿಸಲಾಗಿದೆ.

ಹರಿದಾಡುತ್ತಿದೆ ನಿಂದನೆ ವಿಡಿಯೊ..

ಇಳಕಲ್‌ನಲ್ಲಿ ಡಿಸಿಸಿ ಬ್ಯಾಂಕ್‌ನ ಪಿಗ್ಮಿ ಏಜೆಂಟ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಜಯಾನಂದ ಕಾಶಪ್ಪನವರ ಬೆಂಬಲಿಗರಿಗೆ ನೋಟಿಸ್ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಇದರಿಂದ ಕೋಪಗೊಂಡು ಠಾಣೆಗೆ ತೆರಳಿದ ಕಾಶಪ್ಪನವರ್, ’ಅವನ ಮನಿ ಮುಂದೆ (ಹಾಲಿ ಶಾಸಕರ ಮನೆ)ಹೋಗಿ ಡ್ಯೂಟಿ ಮಾಡು ನೀನು, ಹುಡುಗಾಟ ಹಚ್ಚೀ ಏನು ನೀನು, ಏ ಮಿಸ್ಟರ್ ನಿನ್ನಂತವನ ನಾನು ಬಹಳ ಮಂದಿ ನೋಡೀನಿ ನಾನು. ಮೈಮೇಲೆ ಬರ್ತೀಯ ನೀನು. ಬಾ ಇಲ್ಲಿ ಹೊರಗೆ ಬಾ ನಿನ್ನ ನೋಡ್ಕೋತೀನಿ. ತೋರಿಸ್ತೀನಿ ಬಾ ಎಂದು ಸಿಪಿಐ ಅಯ್ಯನಗೌಡ ಪಾಟೀಲ ಅವರಿಗೆ ವಿಜಯಾನಂದ ಕಾಶಪ್ಪನವರ ಬೆದರಿಕೆ ಹಾಕುವುದು. ಅದಕ್ಕೆ ಪ್ರತಿಯಾಗಿ ’ಸರಿ ಮಾತಾಡಿ ಸರ್, ಗೌರವ ಕೊಟ್ಟು ಮಾತಾಡಿ ಸರ್, ಈಗಲೇ ಬರ್ತೀನಿ ಸರ್ ಏನ್ ಮಾಡ್ತೀರಿ‘ ಎಂದು ಅಯ್ಯನಗೌಡ ಪಾಟೀಲ ಹೇಳುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.