ಹೊಸಪೇಟೆ: ತಾಲ್ಲೂಕಿನ ಧರ್ಮಸಾಗರದ ತೋಟದ ಬಾವಿಯಲ್ಲಿ ಮುಳುಗಿ ರುದ್ರೇಶ್ ಜಡಿಯಪ್ಪ (14) ಎಂಬ ಬಾಲಕ ಮೃತಪಟ್ಟಿದ್ದಾನೆ.

‘ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಎಂಟನೇ ತರಗತಿಯಲ್ಲಿ ಓದುತ್ತಿದ್ದ ರುದ್ರೇಶ್ ತನ್ನ ಮೂವರು ಗೆಳೆಯರ ಜತೆಗೆ ಗ್ರಾಮದ ಪಂಚಪ್ಪ ಎಂಬುವರ ಬಾವಿಯಲ್ಲಿ ಈಜಾಡಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಸಿಕ್ಕಿಕೊಂಡು ಸಾವನ್ನಪ್ಪಿದ್ದಾನೆ’ಎಂದು ತಹಶೀಲ್ದಾರ್ ಡಿ.ಜಿ. ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಸುರಿದ ಮಳೆಯಿಂದ ಬಾವಿಯಲ್ಲಿ ಕೆಸರು ಜಮೆಯಾಗಿತ್ತು. ಅದರಲ್ಲಿ ರುದ್ರೇಶ್ ಸಿಲುಕಿಕೊಂಡಿದ್ದಾನೆ. ಶನಿವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಹುಡುಕಾಡಿದರೂ ಶವ ಸಿಕ್ಕಿರಲಿಲ್ಲ. ಭಾನುವಾರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಶವವನ್ನು ಮೇಲಕ್ಕೆ ತೆಗೆದಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.