ಬಳ್ಳಾರಿ: ಜೋಳದರಾಶಿ ದೊಡ್ಡನಗೌಡರ 25ನೇ ಪುಣ್ಯಸ್ಮರಣೆ ಪ್ರಯುಕ್ತ ಮೇ 10ರಂದು ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ತಿಳಿಸಿದರು.

ನಾಟಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ದೊಡ್ಡನಗೌಡರ ಸ್ಮರಣೆಗಾಗಿ, ಮಹಾನ್ ಪೌರಾಣಿಕ ಹಾಗೂ ಸಂಗೀತಮಯವಾದ ಕುರುಕ್ಷೇತ್ರ ನಾಟಕವನ್ನು ಎಂ.ಗಣೇಶ ಹೆಗ್ಗೋಡು ನಿರ್ದೇಶಿಸಿದ್ದಾರೆ. ಸತ್ಯ ಶೋಧನ ರಂಗಸಮುದಾಯದ 16 ಯುವಕಲಾವಿದರು ಅಭಿನಯಿಸಲಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿ.ಪುಟ್ಟಸ್ವಾಮಯ್ಯ, ಪಿ.ವಜ್ರಪ್ಪ, ಕಲ್ಲೂರು ಶ್ರೀನಿವಾಸ ಮತ್ತು ಕುವೆಂಪು ಕೃತಿಗಳನ್ನು ಸಂಯೋಜಿಸಿ ವಿಶಿಷ್ಟ ನಾಟಕ ಇದುವರೆಗೆ 104 ಪ್ರದರ್ಶನ ಕಂಡಿದ್ದು, ಮೇ 10ರಂದು 105ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷ ಎಂದರು.

ಲೆಗ್ ಹಾರ್ಮೊನಿಯಂ, ತಬಲಾಗಳೊಂದಿಗೆ ಸ್ವತಃ ನಟ ನಟಿಯರೇ ಹಾಡುತ್ತಾ, ಬಣ್ಣದ ಪರದೆ, ಅರಮನೆ ದೃಶ್ಯಗಳೊಂದಿಗೆ ಇಡೀ ರಾಜ್ಯದಾದ್ಯಂತ ಕಲಾಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದ್ದಾರೆ ಎಂದರು.

ರಾಮೇಶ ಟ್ರಸ್ಟ್ ಮತ್ತು ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ದ ಸಹಯೋಗದಲ್ಲಿ ಪ್ರದರ್ಶನ ನಡೆಯಲಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಪೊಂಪನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.