ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್‌ನಲ್ಲಿರುವ ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಭೂಮಿಯನ್ನು ಮಾರಾಟ ಮಾಡುತ್ತಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಕೆ.ಸಿ ಕೊಂಡಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಮಿಯನ್ನೂ ‘ಲೀಸ್ ಕಮ್ ಸೇಲ್’ ಆಧಾರದಲ್ಲಿ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಬಳಿಕ ಮಾರಾಟ ಮಾಡಬೇಕಿತ್ತು. ಹಲವು ಕಾರಣಗಳಿಂದ ವಿಳಂಬವಾಯಿತು. ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇತ್ತೀಚೆಗೆ ನ್ಯಾಯಾಲಯವೂ ಅವರ ಪರವಾಗಿ ತೀರ್ಪು ನೀಡಿದೆ. ಅದರಂತೆ ಮಾರಾಟ ಮಾಡಲು ತೀರ್ಮಾನವಾಗಿದೆ. ಇದರಲ್ಲಿ ಅವ್ಯವಹಾರ ಆಗಿದೆ ಎಂದು ಅರವಿಂದ ಬೆಲ್ಲದ್ ಸೇರಿದಂತೆ ಸಂಘ–ಸಂಸ್ಥೆಗಳು, ಹೊರಗಿನವರು ಬಳ್ಳಾರಿ ಜನರ ದಾರಿತಪ್ಪಿಸುತ್ತಿದ್ದಾರೆ. ದಾಖಲೆಗಳನ್ನು ನೋಡಿ ಯಾರಾದರೂ ಮಾತನಾಡಬೇಕು’ ಎಂದರು.

‘ಆರಂಭದಲ್ಲಿ ವಾರ್ಷಿಕ 1.5 ಲಕ್ಷ ಟನ್ ಇದ್ದ ಜಿಂದಾಲ್ ಉತ್ಪಾದನೆ ಈಗ 27 ಲಕ್ಷ ಟನ್‌ಗೆ ಏರುತ್ತಿದೆ. ಇದು ಬಳ್ಳಾರಿಯ ಜೀವನಾಡಿ. ಅದನ್ನು ನಂಬಿಕೊಂಡು 30 ಸ್ಪಾಂಜ್ ಐರನ್ ಕಂಪನಿಗಳಿವೆ. 10–12 ವಾಷಿಂಗ್ ಘಟಕಗಳಿವೆ, ಹಲವರಿಗೆ ಉದ್ಯೋಗ ಸಿಕ್ಕಿದೆ’ ಎಂದು ಸಮರ್ಥಿಸಿದರು.

‘ಬೇರೆ ಕಾರ್ಖಾನೆಗಳು ಬರಲು ಇಲ್ಲಿ ಪೂರಕ ವ್ಯವಸ್ಥೆಯೂ ಇಲ್ಲ. ಹೀಗಾಗಿ ನಾವು ಜಿಂದಾಲ್ ಅನ್ನು ಬೆಂಬಲಿಸಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.