ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯ ತುಂಬುವ ಅಂಚಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.20 ಅಡಿ ನೀರಿನ ಸಂಗ್ರಹವಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಲು ಅರ್ಧ ಅಡಿಗೂ ಅಧಿಕ ನೀರು ಬೇಕಿದೆ. 33,737 ಕ್ಯುಸೆಕ್ ಒಳಹರಿವು ಇದೆ. ಎರಡುವರೆ ಟಿಎಂಸಿಗೂ ಅಧಿಕ ನೀರು ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.

ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 5,000 ದಿಂದ 50,000 ಕ್ಯುಸೆಕ್ ವರೆಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರು ಬಿಡಲಾಗುವುದು. ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಹೋಗಬೇಕೆಂದು ಮಂಡಳಿ ಕೋರಿದೆ.

ಶುಕ್ರವಾರ ಏರಿಕೆ ಕಂಡಿದ್ದ ಒಳಹರಿವು ಶನಿವಾರ ಪುನಃ ತಗ್ಗಿತು. ಭಾನುವಾರ ಮತ್ತಷ್ಟು ಕಡಿಮೆಯಾಗಿದೆ. ಶನಿವಾರ 49,073 ಕ್ಯುಸೆಕ್ ಒಳಹರಿವು ಇತ್ತು. ಶುಕ್ರವಾರ 51,177 ಕ್ಯುಸೆಕ್, ಗುರುವಾರ 50,609 ಕ್ಯುಸೆಕ್ ಒಳಹರಿವು ದಾಖಲಾಗಿತ್ತು

ಜಲಾಶಯ

ಗರಿಷ್ಠ ಮಟ್ಟ

ಇಂದಿನ ಮಟ್ಟ

ಒಳಹರಿವು

ಹೊರಹರಿವು (ಕ್ಯುಸೆಕ್‌ಗಳಲ್ಲಿ)

ತುಂಗಭದ್ರಾ(ಅಡಿ)

1,633

1,632.20

33,737

8,423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.