ಆನೇಕಲ್: ಶಾಲಾ ಶಿಕ್ಷಣ ಇಲಾಖೆ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 200 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಾಕತ್ತು ಪ್ರದರ್ಶಿಸಿದರು.

ಉತ್ತಮ ಪ್ರದರ್ಶನ ನೀಡಿದ

ವಿವಿಧ ವಿಭಾಗಗಳಲ್ಲಿ 45 ಮಂದಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಸೆಪ್ಟೆಂಬರ್ 10ರಂದು ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಾಜಪ್ಪ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮರಕ್ಷಣೆಗಾಗಿ ಮತ್ತು ದೈಹಿಕ ದೃಡತೆಯನ್ನು ಕಾಪಾಡಲು ಕರಾಟೆ ಮತ್ತು ಯೋಗ ಶಿಬಿರಗಳು ಉಪಯುಕ್ತವಾಗಿದೆ. ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಕರಾಟೆ, ವ್ಯಾಯಾಮ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಹಾವಳಿಯಿಂದಾಗಿ ಯುವ ಸಮುದಾಯ ಆಟಗಳತ್ತ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.

ಕ್ರೀಡೆಗಳು ಯುವಕರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಕರಾಟೆಯಿಂದಾಗಿ ದೈಹಿಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಮಾನಸಿಕ ಶಕ್ತಿಯು ಹೆಚ್ಚಾಗಲಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕರಾಟೆಯನ್ನು ಅಭ್ಯಾಸ ಮಾಡಿಸುತ್ತಿದ್ದಾರೆ. ಸಂಘ ಸಂಸ್ಥೆಗಳ ಸಹಕಾರ ಪಡೆದು ಸರ್ಕಾರಿ ಶಾಲೆಗಳಲ್ಲಿಯೂ ಕರಾಟೆ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕರಾಟೆ ತರಬೇತುದಾರ ನಾಗೇಂದ್ರರಾವ್ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದಷ್ಟೇ ಮಹತ್ವವನ್ನು ಕ್ರೀಡೆಗಳಿಗೂ ನೀಡಬೇಕು. ಕ್ರೀಡೆಗಳಿಂದಾಗಿ ಹಲವಾರು ಲಾಭಗಳಿವೆ. ಆರೋಗ್ಯ ಮತ್ತು ಸರ್ಕಾರಿ ಕೆಲಸಗಳು ಸಹ ದೊರೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ವಹಿಸಿ ಕ್ರೀಡೆಗಳತ್ತ ಗಮನ ಹರಿಸಬೇಕು ಎಂದರು.

ದೈಹಿಕ ಶಿಕ್ಷಕರ ಸಂಘದ ಅಶೋಕ್, ತಾಲ್ಲೂಕು ಮಟ್ಟದ ಕರಾಟೆ ಆಯೋಜಕಿ ಎಸ್.ವಿ.ಲಕ್ಷ್ಮೀ, ಕರಾಟೆ ತರಬೇತಿದಾರರಾದ ನಾಗೇಂದ್ರರಾವ್, ಶ್ರೀನಿವಾಸ್, ಸಾಯಿ ಚರಣ್, ಲೋಕೇಶ್, ಸಂತೋಷ್, ಹರಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.