ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಭೂತಾನಹಳ್ಳಿ ಕಿರು ಅರಣ್ಯಕ್ಕೆ ಸೇರಿದ್ದ ಸುಮಾರು ₹20ಕೋಟಿ ಬೆಲೆ ಬಾಳುವ 4 ಎಕರೆ 3 ಗುಂಟೆ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆಯು ಶನಿವಾರ ವಶಕ್ಕೆ ಪಡೆಯಿತು.

ರವಿ ಕಾವಲೆ ಎಂಬುವವರ ವಶದಲ್ಲಿದ್ದ ನಾಲ್ಕು ಎಕರೆ ಮೂರು ಗುಂಟೆ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ರವಿ ಕಾವಲೆ, ಫಾರ್ಮ್ ಹೌಸ್ ಮಾಡಿಕೊಂಡು ಈ ಜಾಗದಲ್ಲಿ ಸ್ವಾಧೀನದಲ್ಲಿದ್ದರು. 1996ರಲ್ಲಿ ಮುನಿಯಮ್ಮ ಎಂಬುವವರಿಂದ ರವಿ ಕಾವಲೆ ಜಮೀನು ಖರೀದಿಸಿ ಫಾರ್ಮ್ ಹೌಸ್ ಮಾಡಿಕೊಂಡಿದ್ದರು. ಈ ಜಮೀನು ಭೂತಾನಹಳ್ಳಿ ಸರ್ವೆ ನಂ.67ರ 4 ಎಕರೆ 3 ಗುಂಟೆ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂದು 19.06.2006ರಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ವಿವಿಧ ನ್ಯಾಯಾಲಯಗಳ ಹೋರಾಟದ ನಂತರ ಶುಕ್ರವಾರ ಅರಣ್ಯ ಸಂರಕ್ಷಣಾಧಿಕಾರಿ ಮೇಲ್ವನವಿ ನ್ಯಾಯಾಲಯದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಆದೇಶ ಹೊರಡಿಸಿ ಸರ್ವೆ ನಂ.67ರ 4 ಎಕರೆ 3 ಗುಂಟೆ ಜಮೀನು ತೆರವುಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಶನಿವಾರ ಬೆಂಗಳೂರು ನಗರ ಡಿಸಿಎಫ್ ಎನ್.ರವೀಂದ್ರ ಕುಮಾರ್, ಮಾರ್ಗದರ್ಶನದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಅರಣ್ಯಾಧಿಕಾರಿ ಗಣೇಶ್, ಆನೇಕಲ್ ವಲಯ ಅರಣ್ಯಾಧಿಕಾರಿ ಶ್ರೀಧರ್, ಕಗ್ಗಲಿಪುರ ವಲಯ ಅರಣ್ಯಾಧಿಕಾರಿ ರಮೇಶ್ ಕಾಂಬ್ಳೆ, ಡಿಆರ್ಎಫ್ ಬಾಲಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಒತ್ತುವರಿ ಜಮೀನು ತೆರವುಗೊಳಿಸಲಾಯಿತು.

ಎಸಿಎಫ್ ಗಣೇಶ್ ಮಾತನಾಡಿ, ‘20 ವರ್ಷಗಳ ಹಿಂದೆ ನಾನು ಆರ್ಎಫ್ಓ ಆಗಿದ್ದ ಅವಧಿಯಲ್ಲಿ ಅರಣ್ಯ ಜಮೀನನ್ನು ವಶಕ್ಕೆ ಪಡೆಯುವ ಸಲುವಾಗಿ ಪ್ರಕರಣ ದಾಖಲು ಮಾಡಲಾಗಿತ್ತು. ಸುಮಾರು 18 ವರ್ಷಗಳ ನಂತರ ತೀರ್ಪು ಬಂದಿದ್ದು ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ’ ಎಂದರು.

ಭೂತಾನಹಳ್ಳಿ ಕಿರು ಅರಣ್ಯ: ಬನ್ನೇರುಘಟ್ಟ ಕಾಡಿಗೆ ಹೊಂದಿಕೊಂಡಿದ್ದ ಭೂತಾನಹಳ್ಳಿ ಸರ್ವೆ ನಂ.67, 68, 69, 70 ಸುಮಾರು 539.28 ಎಕರೆ ಜಮೀನು 1934ರಲ್ಲಿ ಮೈಸೂರು ಮಹಾರಾಜರು ಭೂತಾನಹಳ್ಳಿ ಕಿರು ಅರಣ್ಯ ಎಂದು ಘೋಷಿಸಿ ಅರಣ್ಯ ಇಲಾಖೆಗೆ ನೀಡಿದ್ದರು. ಕ್ರಮೇಣ ಈ ಜಮೀನು ಒತ್ತುವರಿಯಾಗಿ ಕಂದಾಯ ಇಲಾಖೆ ದಾಖಲೆಗಳಲ್ಲಿ ಗೋಮಾಳ ಎಂದು ನಮೂದಿಸಲಾಗಿತ್ತು. ಈ ಜಮೀನು ಹಲವು ಮಂದಿಗೆ ಮಂಜೂರು ಮಾಡಲಾಗಿತ್ತು. ಈ ಜಮೀನಿನಿನಲ್ಲಿ ಬಡಾವಣೆ ನಿರ್ಮಿಸಿ ಮಾರಾಟ ಸಹ ಮಾಡಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆ ಸುದೀರ್ಘ ಕಾನೂನು ಹೋರಾಟ ನಡೆಸಿದ ಪರಿಣಾಮ 350 ಎಕರೆ ಅರಣ್ಯ ಇಲಾಖೆಗೆ ಸೇರಿದ ಜಮೀನಿನ ಒತ್ತುವರಿ ತೆರವುಗೊಳಿಸಿ ಅರಣ್ಯ ಇಲಾಖೆ ವಶಕ್ಕೆ ಪಡೆಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.