ದೊಡ್ಡಬಳ್ಳಾಪುರ: ನಗರದ ಅರಳುಮಲ್ಲಿಗೆ ಬಾಗಿಲು ಶಾಲೆ ಕಾಂಪೌಂಡ್ ಒಳಗಿನ ಮರಕ್ಕೆ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸೋಮವಾರ ಬೆಳಿಗ್ಗೆ ನಡೆದಿದೆ.

ಮೃತನನ್ನು ಶಾಲೆಗೆ ಸಮೀಪದ ಸಂಜಯನಗರ ನಿವಾಸಿ ವೆಂಕಟೇಶ್ (55) ಎಂದು ಗುರುತಿಸಲಾಗಿದೆ. ಮೃತರು ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸವಿದ್ದರು. 15 ದಿನಗಳಿಂದ ದೊಡ್ಡಬಳ್ಳಾಪುರ ಸಂಜಯನಗರದಲ್ಲಿ ತಾಯಿ ಮನೆಯಲ್ಲಿ ವಾಸವಿದ್ದರು ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.

ಮೃತ ವೆಂಕಟೇಶ್ ಗಾರೆ ಕೆಲಸ ಮಾಡುತ್ತಿದ್ದು, ಇಬ್ಬರು ಹೆಣ್ಣುಮಕ್ಕಳಿಗೂ ವಿವಾಹ ಮಾಡಿದ್ದಾರೆ. ಪತ್ನಿ ಪ್ರತ್ಯೇಕವಾಗಿದ್ದು ತಾಯಿಯೊಂದಿಗೆ ವಾಸವಿದ್ದ ಈತ ಜೀವನದಲ್ಲಿ ಜಿಗುಪ್ಸೆಯಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.