ಬೈಲಹೊಂಗಲ : ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಮಳೆಯಿಂದಾಗಿ ಮನೆ ಕುಸಿದು ಒಂದೇ ಕುಟುಂಬದ 13 ಜನರು ಗಾಯಗೊಂಡಿದ್ದು, ಆರು ಮಂದಿಗೆ ಹೆಚ್ಚಿನ ಪೆಟ್ಟುಬಿದ್ದಿದೆ.

ಈರಮ್ಮ ಪತ್ರೆಪ್ಪನವರ (95), ಸುಮಂತ ಪತ್ರೆಪ್ಪನವರ (8), ಬಸವಣ್ಣೆಪ್ಪ ತಡಕೋಡ (55), ಶಂಕರೆಪ್ಪ ಪತ್ರೆಪ್ಪನವರ (50), ವಿನಾಯಕ ಪತ್ರೆಪ್ಪನವರ (15), ಪಾರವ್ವ ಪತ್ರೆಪ್ಪನವರ (55) ಅವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಕುಟುಂಬದವರು ಟಿವಿ ನೋಡುತ್ತ ಕುಳಿತ ಸಂದರ್ಭದಲ್ಲಿ ಮನೆಯ ಮಣ್ಣಿನ ಚಾವಣೆ ಕುಸಿದು ಬಿತ್ತು. ಕುಟುಂಬದ ಸದಸ್ಯರು ಎದ್ದು ಓಡಬೇಕು ಎನ್ನುವಷ್ಟರಲ್ಲಿ ಮಣ್ಣಿನ ಗೋಡೆಯೂ ಕುಸಿಯಿತು. ಇದರಿಂದ ಎಲ್ಲರೂ ಮಣ್ಣಿನಡಿ ಸಿಲುಕಿಕೊಂಡರು. ತಕ್ಷಣ ಓಡಿಬಂದ ಸುತ್ತಲಿನ ಜನ ಎಲ್ಲರನ್ನೂ ರಕ್ಷಿಸುವಲ್ಲಿ ಸಫಲರಾದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾಂವ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.