ಅಥಣಿ: ‘ನಿಜಶರಣ ಅಂಬಿಗರ ಚೌಡಯ್ಯ ಅವರ ತತ್ವಾದರ್ಶಗಳನ್ನು ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ಜಬ್ಬಾರ್ ಚಿಂಚಲಿ ಹೇಳಿದರು.

ಇಲ್ಲಿನ ಗಸ್ತಿ ಗಲ್ಲಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಫೋಟೊಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಚೌಡಯ್ಯ ಜಾತ್ಯತೀತ, ಧರ್ಮಾತೀತ, ಮತಾತೀತ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಿದವರು. ಯಾವ ಕಾಯಕವೂ ಮೇಲಲ್ಲ; ಯಾವುದೂ ಕೀಳಲ್ಲ. ಎಲ್ಲವೂ ಸಮಾನವಾದುದು ಎಂಬ ವೃತ್ತಿ ಗೌರವ ಎತ್ತಿ ಹಿಡಿದವರು’ ಎಂದು ಸ್ಮರಿಸಿದರು.

ಸಂಘದ ಕುಮಾರ ಕೋಳಿ, ರಮೇಶ ಗಸ್ತಿ, ಮಹಾಂತೇಶ ಗಸ್ತಿ, ಶಿವು ಗಸ್ತಿ, ಮುತ್ತು ಗಸ್ತಿ, ರೋಹನ ಗಸ್ತಿ, ಇಮ್ತಿಯಾಜ ಹಿಪ್ಪರಗಿ, ಮುರುಗೇಶ ಕೋಳಿ, ಅನಿಲ ಗಸ್ತಿ, ಸುನಿಲ ಗಸ್ತಿ, ಮುರುಗೇಶ ಗಸ್ತಿ, ಶ್ರೀಕಾಂತ ಗಸ್ತಿ, ಸುವರ್ಣಾ ಕೋಳಿ, ರಾಧಿಕಾ ಗಸ್ತಿ, ಯಲವ್ವಾ ಗಸ್ತಿ, ನೀಲವ್ವಾ ಗಸ್ತಿ, ರಾಜಶ್ರೀ ಬಸರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.