ರಾಮದುರ್ಗ: ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಠ ಹಿಡಿದ ತಮ್ಮದೇ ಪಕ್ಷದ ಕಾರ್ಯಕರ್ತರ ವರ್ತನೆಗೆ ಸಹನೆ ಕಳೆದುಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ ಕಾರ್ಯಕರ್ತರನ್ನು ಹೊರ ಹೋಗುವಂತೆ ಸೂಚಿಸಿ ಕೊನೆಗೆ ಕ್ಷಮೆ ಕೇಳಿದ ಪ್ರಸಂಗ ಭಾನುವಾರ ಸಂಜೆ ನಡೆಯಿತು.

ರಾಮದುರ್ಗದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲ್ಲೂಕು ಸಂಯುಕ್ತ ಮೋರ್ಚಾ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡುವ ವೇಳೆ, ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ವೇದಿಕೆ ಮೇಲಿನ ಸಂಘಟನೆಯವರಿಂದಲೇ ಪಕ್ಷ ಸೋಲುನುಭವಿಸಿದೆ ಎಂದು ನೇರವಾಗಿ ಆರೋಪಿಸಿದರು.

ಒಮ್ಮೆಲೆ ಸೀಮಿತ ಕಳೆದುಕೊಂಡ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಕಾರ್ಯಕರ್ತರು ಅಧ್ಯಕ್ಷ ಮಾತನಾಡುವಾಗ ಮಧ್ಯ ಮಾತನಾಡಬಾರದು. ಸಭೆಯಲ್ಲಿ ಗದ್ದಲ ಮಾಡುವವರು ಸಭೆಯಿಂದ ಹೊರಗೆ ಹೋಗಬೇಕು ಎಂದು ಏರು ದನಿಯಲ್ಲಿ ಹೇಳಿದರು.

’ನಾನೇನು ನಿಮ್ಮ ಮನೆಯಲ್ಲಿ ಊಟ ಮಾಡಲು ಬಂದಿಲ್ಲ. ನಿಮ್ಮಿಂದ ಏನೂ ಅಪೇಕ್ಷೆ ಇಲ್ಲ. ಮಧ್ಯದಲ್ಲಿ ಮಾತನಾಡುವ ಕಾರ್ಯಕರ್ತರು ಸಭೆಯಿಂದ ಹೊರ ಹೋಗಬೇಕು ಎಂದು ನೇರವಾಗಿ ಹೇಳಿಕೆ ನೀಡಿದ್ದರಿಂದ ಸಭೆಯಲ್ಲಿ ಗದ್ದಲ ಉಂಟಾಗಿ ಕೊನೆಗೆ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಕ್ಷಮೆ ಕೋರಿದರು.

ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಪಕ್ಷ ಮುಖ್ಯ ಹೊರತು ವ್ಯಕ್ತಿ ಮುಖ್ಯವಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದವರು ಪಕ್ಷದ ಹೊರಗಡೆಯೇ ಇದ್ದಾರೆ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಪಕ್ಷದಲ್ಲಿ ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ. ಕಾರ್ಯಕರ್ತರು ಪದೇ ಪದೇ ಅದೇ ವಿಷಯವನ್ನು ಪ್ರಸ್ತಾವ ಮಾಡುವಂತಿಲ್ಲ ಎಂದು ಕಡಕ್ ಆಗಿ ಹೇಳಿದರು.

ಪಕ್ಷಕ್ಕೆ ಅನ್ಯಾಯ ಮಾಡಿದವರಿಗೆ ಪಕ್ಷದಿಂದ ಯಾವುದೇ ಟಿಕೆಟ್ ಮತ್ತು ಸ್ಥಾನಮಾನ ನೀಡುವುದಿಲ್ಲ. ಜಿಲ್ಲಾಧ್ಯಕ್ಷನಾಗಿ ಎಲ್ಲ ವರದಿಗಳನ್ನು ಮೇಲಿನವರಿಗೆ ಕಳಿಸಲಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ. ಪಕ್ಷ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶೀಘ್ರ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಸೂಚನೆಯಂತೆ ಕಾರ್ಯಕ್ರಮದಿಂದ ಹೊರ ಹೋಗಲು ಕಾರ್ಯಕರ್ತರು ಯತ್ನಿಸಿದರು. ಆದರೆ ಕಲ್ಯಾಣ ಮಂಟಪದ ಮುಖ್ಯಧ್ವಾರವನ್ನು ಮುಚ್ಚಲಾಗಿತ್ತು. ಪತ್ರಕರ್ತರು ಗದ್ದಲವನ್ನು ಸೆರೆ ಹಿಡಿಯಲು ಮುಂದಾದಾಗ ಕೆಲವರು ಅದಕ್ಕೂ ಆಕ್ಷೇಪಣೆ ವ್ಯಕ್ತ ಪಡಿಸಿದರು.

ಪಕ್ಷದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡುವವರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದಿಂದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆ ಮನಮುಟ್ಟುವಂತೆ ಶ್ರಮ ವಹಿಸಬೇಕು ಎಂದು ಸಂಜಯ ಪಾಟೀಲ ಕರೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಯೋಜನೆಗಳಾದ ಕಿಸಾನ್ ಸಮ್ಮಾನ್, ಕೃಷಿ ಸಂಚಯ, ರಾಜ್ಯದ ವಿದ್ಯಾನಿಧಿ ಯೋಜನೆಗಳನ್ನು ಕಡಿತಗೊಳಿಸಲು ಯತ್ನಿಸುತ್ತಿದೆ. ಅದನ್ನು ವಿರೋಧಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಜಿಲ್ಲಾ ಕೋರ್ ಕಮಿಟಿ ಅಧ್ಯಕ್ಷ ಡಾ. ಕೆ.ವಿ. ಪಾಟೀಲ, ಪಿ.ಎಫ್. ಪಾಟೀಲ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ರೇಖಾ ಚಿನ್ನಾಕಟ್ಟಿ, ರಘುನಾಥ ರೇಣಕೆ, ರವಿ ಸೂರ್ಯ, ವಿಜಯ ಗುಡದಾರೆ, ಶ್ರೀದೇವಿ ಮಾದನ್ನವರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.