ಕಬ್ಬು ಬೆಳೆಗಾರರಿಗಿಂತಲೂ ಹೆಚ್ಚು ಸಾಲ ದ್ರಾಕ್ಷಿ ಬೆಳೆದವರಿಗೆ ಇದೆ. ದ್ರಾಕ್ಷಿ ಬೇಸಾಯಕ್ಕೂ ಮುನ್ನ ಸಾಲ ಬೆಳೆಸಾಲ ಒಣದ್ರಾಕ್ಷಿ ಮಾಡಲು ಸಾಲ ಶೀಥಲೀಕರಣಕ್ಕೆ ಸಾಲ; ಹೀಗೆ ನಾಲ್ಕು ರೀತಿಯ ಸಾಲಗಳು ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ತಲೆ ಮೇಲಿವೆ. ಸದ್ಯ ಸಿಗುತ್ತಿರುವ ದರವನ್ನು ಗಮನಿಸಿದರೆ ಇನ್ನಷ್ಟು ಸಾಲವೇ ಆಗುತ್ತದೆ ಹೊರತು; ಬಡ್ಡಿ ತುಂಬುವುದಕ್ಕೂ ಸಾಧ್ಯವಿಲ್ಲ ಎನ್ನುವುದು ರೈತರ ಗೋಳು.
ಬೆಂಬಲ ಬೆಲೆಗೆ ಡೊಂಗರಗಾಂವ ಆಗ್ರಹ
ದ್ರಾಕ್ಷಿ ಹೊರತಾಗಿ ಉಳಿದೆಲ್ಲ ಬೆಳೆಗಳಿಗೂ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದೆ. ಕಳೆದ ವರ್ಷ ಅಡಿಕೆ ಕಾಫಿ ಕಬ್ಬು ತೆಂಗನ್ನು ಕೂಡ ಬೆಂಬಲ ಬೆಲೆ ಅಡಿ ಪರಿಗಣಿಸಲಾಗಿದೆ. ಆದರೆ ನಮ್ಮದೇ ರಾಜ್ಯ ಪ್ರಮುಖ ಬೆಳೆಯಾದ ದ್ರಾಕ್ಷಿಯನ್ನು ಮಾತ್ರ ಹೊರಗೆ ಇಡಲಾಗಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಮಾಜಿ ಶಾಸಕ ಒಣದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷರೂ ಆದ ಶಹಜಹಾನ್ ಡೊಂಗರಗಾಂವ್ ಕಿಡಿ ಕಾರುತ್ತಾರೆ. ಒಣದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ₹200 ದರ ಸಿಗುತ್ತಿತ್ತು. ಕಳೆದ ಒಂದು ದಶಕದಿಂದಲೂ ಇದು ಇಷ್ಟೇ ಇದೆ. ಕೇಂದ್ರ ಸರ್ಕಾರ ಇದನ್ನಾದರೂ ಪರಿಣಿಸಬೇಕು. ಸದ್ಯ ಇರುವ ದರಕ್ಕೆ ₹70 ಸೇರಿಸಿ ₹200ರಷ್ಟು ಬೆಂಬಲ ಬೆಲೆ ನೀಡಬೇಕು ಎನ್ನುತ್ತಾರೆ ಅವರು.