ಗೋಕಾಕ: ಶಾಲೆಗಳು ದೇವಾಲಯಗಳಾಗಿದ್ದು, ಮಕ್ಕಳನ್ನು ದೇವರಂತೆ ಕಾಣಬೇಕು. ಅವರ ಸೇವೆ ಮಾಡುವುದು ಪುಣ್ಯದ ಕಾರ್ಯ ಎಂದು ಇನ್ನರ್ವ್ಹೀಲ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲೆ ಜ್ಯೋತಿ ದಾಸ್ ಹೇಳಿದರು.

ಶುಕ್ರವಾರ ತಾಲ್ಲೂಕಿನ ದುಂಡಾನಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರವ್ಹೀಲ್ ಸಂಸ್ಥೆಯ ಹ್ಯಾಪಿ ಸ್ಕೂಲ್ ಕಾರ್ಯಕ್ರಮದ ಅಡಿ ಶಾಲೆಗೆ ಕಲ್ಪಿಸಲಾದ ವಿವಿಧ ಸವಲತ್ತು, ಸೌಕರ್ಯ ಮತ್ತು ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನರವ್ಹೀಲ್ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಶ್ರಮಿಸುತ್ತಿದೆ ಎಂದರು.

ನ. 15 ಸಂಸ್ಥೆಯ ಮಾಜಿ ಅಧ್ಯಕ್ಷೆ ಡಾ.ಪಾರ್ವತಿ ಹೊಸಮನಿ ಅವರ ಸ್ಮರಣೆ ದಿನವಾಗಿದ್ದು ಅವರ ಸ್ಮರಣಾರ್ಥ ಶಾಲೆಗೆ ಬಣ್ಣ, ಮಕ್ಕಳಿಗೆ ಆಟದ ಸಲಕರಣೆ, ಬ್ಯಾಗ್, ನೋಟಬುಕ್ ಮತ್ತಿತರ ಶೈಕ್ಷಣಿಕ ಅಗತ್ಯಗಳನ್ನು ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಸಲಕರಣೆಗಳನ್ನು ನೀಡುವುದಾಗಿ ಶಾಲಾ ಸುಧಾರಣಾ ಸಮಿತಿಗೆ ಭರವಸೆ ನೀಡಿದ ಅವರು, ವಿದ್ಯಾರ್ಥಿಗಳು ಇದರ ಸದುಪಯೋಗದಿಂದ ಪ್ರತಿಭಾನ್ವಿತರಾಗಿರಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ ನಗರ ಘಟಕ ಅಧ್ಯಕ್ಷ ಜಯಾ ಕಮತ, ಕಾರ್ಯದರ್ಶಿ ಗಿರಿಜಾ ಮುನ್ನೋಳಿಮಠ, ರೂಪಾ ಮುನವಳ್ಳಿ, ವಿದ್ಯಾ ಗುಲ್ಲ, ಆರತಿ ನಾಡಗೌಡ, ರೋಟರಿ ಸಂಸ್ಥೆಯ ಗೋಕಾಕ ಘಟಕ ಅಧ್ಯಕ್ಷ ಡಾ. ಸಿದ್ದಣ್ಣ ಕಮತ, ಕಾರ್ಯದರ್ಶಿ ರಾಜಶೇಖರ ಮುನ್ನೋಳಿಮಠ, ಸೋಮಶೇಖರ ಮಗುದಮ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ ಹೊರಟ್ಟಿ, ಮುಖ್ಯ ಶಿಕ್ಷಕಿ ಎಂ.ಬಿ.ಅತ್ತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.