ಬೆಳಗಾವಿ: 2028ರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದೇನೆ. ಈ ಚುನಾವಣೆಯು ಇತರರನ್ನು ಆಯ್ಕೆ ಮಾಡುವ ನಾಯಕನಾಗಿ ನನ್ನನ್ನು ಬಲಪಡಿಸಿದೆ. ಬಿಜೆಪಿ ಹಿಡಿತದಲ್ಲಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ಈ ಹಿಂದೆ ಗೆದ್ದಿದ್ದೇವೆ’ ಎಂದಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
.ಗ್ಯಾರಂಟಿ, ಅಭಿವೃದ್ಧಿಯಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಗೆಲುವು: ಸತೀಶ.
ಇಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಈಗ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ. ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆ ಬಗ್ಗೆ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಸೋತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ, ‘ಮಹಾರಾಷ್ಟ್ರದಲ್ಲಿ ನಮ್ಮ ಸೋಲಿಗೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳೇ ಕಾರಣ. ಇವಿಎಂಗಳ ಬಗ್ಗೆ ಬಹಳಷ್ಟು ಅನುಮಾನವಿದೆ. ಎಲ್ಲಿಯವರೆಗೆ ಅವು ಇರುತ್ತವೆಯೋ, ಅಲ್ಲಿಯವರೆಗೆ ದೇಶದಲ್ಲಿ ಇದೇರೀತಿ ಪರಿಸ್ಥಿತಿ ಇರುತ್ತದೆ. ಇವಿಎಂನಲ್ಲೂ ಹೊಂದಾಣಿಕೆ ಇದೆ’ ಎಂದರು.
.ಶಿಗ್ಗಾವಿ ಉಪಚುನಾವಣೆ | ಗ್ಯಾರಂಟಿಗಳು ಜನಮನ ಗೆದ್ದಿವೆ: ಸತೀಶ ಜಾರಕಿಹೊಳಿ.
ಬೆಳಗಾವಿ ಪಾಲಿಕೆ ಆಯುಕ್ತರಾಗಿ ಕಿರಿಯ ಅಧಿಕಾರಿ ನೇಮಿಸಿರುವ, ಇದಕ್ಕೆ ಪಾಲಿಕೆಯಲ್ಲಿನ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ‘ಆ ಇಲಾಖೆ ಮುಖ್ಯಸ್ಥರಾದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವರ್ಗಾವಣೆ ಮಾಡಿದ್ದಾರೆ. ಈ ವಿಷಯವಾಗಿ ಅವರು ಉತ್ತರಿಸುತ್ತಾರೆ’ ಎಂದರು.
.Shiggaon Election Results | ಕಾಂಗ್ರೆಸ್ ಸರ್ಕಾರದ ಹಣದ ಹೊಳೆ: ಭರತ್ ಬೊಮ್ಮಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.