ಬೆಳಗಾವಿ: ಇಲ್ಲಿನ ಕೆಎಲ್ಎಸ್–ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಆವಿಷ್ಕಾರ ಕೋಶ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಭದ್ರತಾ ಹ್ಯಾಕಥಾನ್ ‘ಮಂಥನ್-2021’ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ದೇಶದ ವಿವಿಧ ಕಾಲೇಜುಗಳ 3ಸಾವಿರ ತಂಡಗಳು ತಮ್ಮ ಆಲೋಚನೆಗಳನ್ನು ಸಲ್ಲಿಸಿದ್ದವು ಮತ್ತು ಅಗ್ರ 115 ತಂಡಗಳು ಅಂತಿಮ ಘಟಕ್ಕೆ ಅರ್ಹತೆ ಪಡೆದಿದ್ದವು. ಜಿಐಟಿಯ ಪ್ರೊ.ಗಜೇಂದ್ರ ದೇಶಪಾಂಡೆ ಮತ್ತು ಹೈದರಾಬಾದ್ನ ಕ್ರಿಯೇಟಿವ್ ಕ್ರ್ಯೂಜ್ನ ಡಾಟಾ ಸೈಂಟಿಸ್ಟ್ ಕಲ್ಯಾಣಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸ್ನೇಹಾ ಪಾಟೀಲ್, ಸುಮೇಧಾ ಕುಲಕರ್ಣಿ, ರಶ್ಮಿ ಕದಂ, ಕಾರ್ತಿಕ್ ನನ್ನೆಬೋಯಿನಾ, ಆಶುತೋಷ್ ಮೂರ್ತಿ ಮತ್ತು ಸುಶಾಂತ್ ಪಾಟೀಲ್ ಅವರು ಕಲ್ಪನೆಯನ್ನು ಸಲ್ಲಿಸಿದ್ದಾರೆ.

‘ಇಂಗ್ಲಿಷ್ ಪಠ್ಯದ ವಿಶ್ಲೇಷಣೆ’ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ಮಿಶ್ರ ಭಾಷೆಯಲ್ಲಿ (ಹಿಂದಿ ಮತ್ತು ಇಂಗ್ಲಿಷ್ ಪದಗಳ ಸಂಯೋಜನೆ) ಬರೆದ ನಿಂದನೀಯ ವಿಷಯ ಗುರುತಿಸುವುದು ಮತ್ತು ಅದನ್ನು ಅಧಿಕಾರಿಗಳಿಗೆ ವರದಿ ಮಾಡುವುದು ಅವರ ಕಾರ್ಯವಾಗಿತ್ತು.

ಈ ವಿದ್ಯಾರ್ಥಿಗಳನ್ನು ಕೆಎಲ್ಎಸ್ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಸದಸ್ಯರು, ಪ್ರಾಂಶುಪಾಲ ಡಾ.ಜಯಂತ್ ಕಿತ್ತೂರ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.