ಬೆಳಗಾವಿ: ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಶ್ರೀಕೃಷ್ಣ ಭವನ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಗ್ರಾಮದ ರಾಚಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ. ಪಾಟೀಲ, ಅಡಿವೇಶ ಇಟಗಿ, ರಾಮನಗೌಡ ಪಾಟೀಲ, ಸಿದ್ದಪ್ಪ ಚಾಪಗಾವಿ, ವಿಠ್ಠಲ ಅರ್ಜುನವಾಡಿ, ಭೂದಾನಿಗಳಾದ ಶಿವಬಸಪ್ಪ ಜಗಮನಿ, ನಾಗರಾಜ ಜಗಮನಿ, ಹಿರಿಯರಾದ ಬಸವರಾಜ ಹಾಯಣ್ಣವರ, ಅರವಿಂದ ವೈದ್ಯರು, ಸಂಗಪ್ಪ ಕುಡಚಿ, ವೈ.ಬಿ. ಪೂಜೇರ, ವೈ.ಆರ್. ನಾಯಕ, ಎಂ.ಪಿ. ಹೊಟ್ಟಿನ್ನವರ, ಮರ್ಸಿದ್ದಿ ಬಾಳೆಕುಂದರಗಿ ಭಾಗವಹಿಸಿದ್ದರು.

ಬೆಳವಟ್ಟಿ ಗ್ರಾಮದಲ್ಲಿ ತಲಾ ₹ 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ರಾವಳನಾಥ ಮತ್ತು ಸಾತೇರಿ ಹಾಗೂ ಮಹಾಲಕ್ಷ್ಮಿ ಮಂದಿರಗಳ ಕಟ್ಟಡದ ಪೂಜೆಯನ್ನು ಶಾಸಕಿ ನೆರವೇರಿಸಿದರು.

‘ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿಯ ಜನರು ಅಭಿವೃದ್ಧಿ ಪರವಾಗಿರುವವರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಶಾಸಕಿಯಾಗಿ ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಆದಾಗ್ಯೂ ಜನರು ತೋರಿಸುತ್ತಿರುವ ಪ್ರಾತಿ, ವಾತ್ಸಲ್ಯ ನೋಡಿದರೆ ಹೃದಯ ತುಂಬಿ ಬರುತ್ತದೆ’ ಎಂದರು.

ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ದೇವಸ್ಥಾನ ಸಮಿತಿಯವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.