ಬೆಳಗಾವಿ: ’ಗೋವಾದಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಲ್ಲಿ 25 ಜನ ಇದ್ದಾರೆ. ಆದರೆ ಕೇಂದ್ರ ಸರ್ಕಾರ ಮಹದಾಯಿಗೆ ನೀಡಿರುವ ತಡೆಯ ವಿರುದ್ಧ ಯಾರೊಬ್ಬರೂ ಮಾತನಾಡುತ್ತಿಲ್ಲ. ರಾಜ್ಯದ ಸಂಸದರು, ಶಾಸಕರು ಶಿಖಂಡಿಗಳು’ ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಕಿಡಿಕಾರಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ರೈತರಿಗೆ ಕಳೆದ 60 ವರ್ಷಗಳಿಂದ ಅನ್ಯಾಯವಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸ್ವಾರ್ಥ ರಾಜಕಾರಣಕ್ಕೆ ರೈತರನ್ನು ಬಲಿ ಕೊಟ್ಟಿದ್ದಾರೆ.ಬಿಜೆಪಿ ನಾಯಕರುಚುನಾವಣೆ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡುತ್ತಾರೆ. ಬಳಿಕ ಅದಕ್ಕೂತಮಗೂಸಂಬಂಧ ಅಲ್ಲ ಎಂಬಂತೆ ಇರುತ್ತಾರೆ. ರಾಜ್ಯದ ಸಂಸದರು, ಶಾಸಕರು ಎಲ್ಲರಿಗಿಂತ ದುಷ್ಟರು ಎಂದು’ ಕಿಡಿಕಾರಿದರು.

‘ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಆದ್ದರಿಂದ ರೈತರು ನೀರು ಕೊಡುವವರೆಗೂ ಯಾವುದೇ ಸಾಲಗಳ ಮರುಪಾವತಿ ಮಾಡಬಾರದು. ರೈತರು ಸಾಲಕ್ಕಾಗಿ ಸಾಯಬಾರದು. ಸಂಸದರು, ಶಾಸಕರೇ ಸಾಯುವಂತೆ ಮಾಡಬೇಕು’ ಎಂದು ಹೇಳಿದರು.

’ಕಳಸಾ ಬಂಡೂರಿ ನಾಲಾದ ಮೂರು ಬೊಗಸೆ ನೀರು ಕುಡಿದು ಸಾಯಬೇಕು ಎಂದುಕೊಂಡಿದ್ದೆ. ಆದರೆ ಈಗ ರಾಜಕಾರಣಿಗಳ ಬಾಯಿಗೆ ಮೂರು ಹಿಡಿ ಮಣ್ಣು ಹಾಕಿಯೇ ಸಾಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಕೃಷಿಕ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದ್ದಗೌಡ ಮೋದಗಿ, ಆರ್.ಎಸ್.ದರ್ಗೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.