ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ನಕಲಿ ಕೋವಿಡ್ ವರದಿ (ಕೋವಿಡ್ ಪ್ರೊಫೈಲಿಂಗ್ ರಿಪೋರ್ಟ್) ಮತ್ತು ನಕಲಿ ಪ್ರಯೋಗಾಲಯದ ವರದಿ ನೀಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಸಿಇಎನ್ (ಸೈಬರ್,ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಜಿಲ್ಲೆಯ ಖಾನಾಪುರದ ನಿಂಗಾಪುರ ಗಲ್ಲಿಯ ನಿವಾಸಿ ಹಸನಸಾಬ್ ಅಬ್ದುಲ್‍ಖಾದರ್ ಸೈಯದ್ (44) ಬಂಧಿತ ಆರೋಪಿ. ಅವರು ಕೃತ್ಯಕ್ಕೆ ಬಳಸಿದ ಹಲವು ಸಾಮಗ್ರಿಗಳು, ಕಾರು, ₹ 24ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಈಗಾಗಲೇ ಹಲವು ವರದಿಗಳನ್ನು ಸಿದ್ಧಪಡಿಸಿ ಪ್ರಿಂಟ್ ತೆಗೆದು ಇಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಡಿಸಿಪಿ ವಿಕ್ರಂ ಅಮಟೆ, ‘ಪಿಯುಸಿ ಓದಿರುವ ಆರೋಪಿಯು ಈ ಹಿಂದೆ ಡಯಗ್ನೋಸ್ಟಿದ್ರ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರದಿಂದ ಆ ಕೇಂದ್ರ ಮುಚ್ಚಿತು. ಆದರೆ, ಆತ ನಿಯಮ ಬಾಹಿರವಾಗಿ ಪೀರನವಾಡಿಯಲ್ಲಿ ಅದೇ ಹೆಸರಿನಲ್ಲಿ ಸೆಂಟರ್ ತೆರೆದಿದ್ದ. ₹ 2,500ರಿಂದ ₹ 3ಸಾವಿರ ಪಡೆದು ಕೋವಿಡ್ ಪ್ರೊಫೈಲಿಂಗ್ ವರದಿ ನೀಡುತ್ತಿದ್ದ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡದವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.